×
Ad

ಫೆಲೆಸ್ತೀನ್ ಗೆ ಮಾನ್ಯತೆ ನೀಡುವಂತೆ ಎಡಪಂಥೀಯ ಸಂಸದನ ಆಗ್ರಹ: ಇಸ್ರೇಲ್ ಸಂಸತ್ತಿನಲ್ಲಿ ಡೊನಾಲ್ಡ್ ‍ಟ್ರಂಪ್ ಗೆ ಮುಜುಗರ

Update: 2025-10-13 20:08 IST

ಡೊನಾಲ್ಡ್ ಟ್ರಂಪ್ | Photo  Credit : PTI 

ಟೆಲ್ ಅವೀವ್: ಸೋಮವಾರ ಇಸ್ರೇಲ್ ಸಂಸತ್(ನೆಸೆಟ್)ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಝಾ ಕದನ ವಿರಾಮ ಒಪ್ಪಂದದ ಕುರಿತು ಭಾಷಣ ಮಾಡುವಾಗ, ಎಡಪಂಥೀಯ ಸಂಸದರೊಬ್ಬರು ತಮ್ಮ ಆಸನದಿಂದ, ‘ಫೆಲೆಸ್ತೀನ್ ಗೆ ಮಾನ್ಯತೆ ನೀಡಿ’ ಎಂಬ ಘೋಷಣೆಯಿರುವ ಬಿತ್ತಿ ಪತ್ರ ಪ್ರದರ್ಶಿಸಿದ್ದರಿಂದ, ಡೊನಾಲ್ಡ್ ಟ್ರಂಪ್ ಮುಜುಗರಕ್ಕೊಳಗಾದ ಘಟನೆ ನಡೆದಿದೆ.

ಬಳಿಕ, ಭದ್ರತಾ ಸಿಬ್ಬಂದಿಗಳು ಅವರನ್ನು ಸಂಸತ್ತಿನಿಂದ ಹೊರಗೆ ಕರೆದುಕೊಂಡು ಹೋದರು.

ಇಸ್ರೇಲ್-ಹಮಾಸ್ ನಡುವೆ ಎರಡು ವರ್ಷಗಳಿಂದ ನಡೆಯುತ್ತಿದ್ದ ಯುದ್ಧವನ್ನು ಅಂತ್ಯಗೊಳಿಸಲು ಶಾಂತಿ ಒಪ್ಪಂದವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಮ್ಮ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ರನ್ನು ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಪ್ರಶಂಸಿಸುವಾಗ ಈ ಘಟನೆ ನಡೆದಿದೆ.

ಡೊನಾಲ್ಡ್ ಟ್ರಂಪ್ ಗಾದ ಮುಜುಗರಕ್ಕಾಗಿ ನೆಸೆಟ್ ಸ್ಪೀಕರ್ ಅಮೀರ್ ಒಹಾನಾ ಕ್ಷಮೆ ಕೋರಿದರು. ಈ ವೇಳೆ, ಇಸ್ರೇಲ್ ಸಂಸದ ಹಾಗೂ ಮತ್ತೋರ್ವ ಸದಸ್ಯರನ್ನು ಸಂಸತ್ತಿನಿಂದ ಕ್ಷಿಪ್ರವಾಗಿ ಹೊರಹಾಕಿದ ಭದ್ರತಾ ಸಿಬ್ಬಂದಿಗಳ ಕ್ರಮದಿಂದ ಪ್ರಭಾವಿತರಾದ ಡೊನಾಲ್ಡ್ ಟ್ರಂಪ್, ‘ಅವರು ತುಂಬಾ ದಕ್ಷರಾಗಿದ್ದಾರೆ” ಎಂದು ನಗೆಚಟಾಕಿ ಹಾರಿಸಿದರು. ಅವರ ಈ ಮಾತಿಗೆ ಸಂಸತ್ ನಗೆಗಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News