×
Ad

ಗಾಝಾ ನೆರವು ಪೂರೈಕೆ ವ್ಯವಸ್ಥೆಯಲ್ಲಿ ಹೆಚ್ಚಿನ ಪಾತ್ರಕ್ಕೆ ಟ್ರಂಪ್ ಯೋಜನೆ: ವರದಿ

Update: 2025-08-06 22:19 IST

ಡೊನಾಲ್ಡ್ ಟ್ರಂಪ್ | PC : PTI 

ವಾಷಿಂಗ್ಟನ್, ಆ.6: ಗಾಝಾಕ್ಕೆ ಮಾನವೀಯ ನೆರವು ಒದಗಿಸುವ ವ್ಯವಸ್ಥೆಯಲ್ಲಿ ತಮ್ಮ ಪಾತ್ರವನ್ನು ಗಮನಾರ್ಹವಾಗಿ ಹೆಚ್ಚಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮಧ್ಯಪ್ರಾಚ್ಯಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಜೊತೆ ಈ ವಾರದ ಆರಂಭದಲ್ಲಿ ನಡೆಸಿದ ಸಭೆಯಲ್ಲಿ ಇಂತಹ ಯೋಜನೆಯ ಬಗ್ಗೆ ಟ್ರಂಪ್ ಚರ್ಚೆ ನಡೆಸಿದ್ದಾರೆ . ಗಾಝಾದಲ್ಲಿ ಮಾನವೀಯ ನೆರವು ಪೂರೈಕೆ ಪ್ರಯತ್ನಗಳನ್ನು ಇಸ್ರೇಲ್ ಸಮರ್ಪಕವಾಗಿ ನಿರ್ವಹಿಸದ ಕಾರಣ ಟ್ರಂಪ್ ಆಡಳಿತ `ಸ್ವಾಧೀನಪಡಿಸಿಕೊಳ್ಳಬೇಕು' ಎಂದು ಸಭೆಯಲ್ಲಿ ನಿರ್ಧರಿಸಿರುವುದಾಗಿ ವರದಿ ಹೇಳಿದೆ. ಗಾಝಾದಲ್ಲಿ ಹಸಿವಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಡೊನಾಲ್ಡ್ ಟ್ರಂಪ್‍ಗೆ ಇದು ಇಷ್ಟವಿಲ್ಲ. ಆದ್ದರಿಂದ ನೆರವು ಪೂರೈಕೆ ವ್ಯವಸ್ಥೆಯ ನಿಯಂತ್ರಣವನ್ನು ಅಮೆರಿಕ ವಹಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ' ಎಂದು ಅಮೆರಿಕದ ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News