×
Ad

ಭಾರತದ ವಿರುದ್ಧ ಸುಂಕ ಆರೋಪ ಪುನರುಚ್ಚರಿಸಿದ ಟ್ರಂಪ್

Update: 2025-09-03 08:21 IST

PC: x.com/Megatron_ron

ವಾಷಿಂಗ್ಟನ್: ಸುಂಕಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಆರೋಪವನ್ನು ಪುನರುಚ್ಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಲೆ-ಡೇವಿಡ್ಸನ್ ಉದಾಹರಣೆಯನ್ನು ನೀಡಿ ಇದು ನ್ಯಾಯಸಮ್ಮತವಲ್ಲದ ವ್ಯಾಪಾರ ನೀತಿ ಎಂದು ಟೀಕಿಸಿದ್ದಾರೆ.

“ಶೇಕಡ 100ರಷ್ಟು ತೆರಿಗೆ ವಿಧಿಸುವುದರಿಂದ ನಾವು ಏನನ್ನೂ ಕಳುಹಿಸಬಾರದು" ಎಂದು ಹಾರ್ಲೆ ಡೇವಿಡ್ ಸನ್ ಉದಾಹರಣೆ ನೀಡಿ ಸ್ಪಷ್ಟಪಡಿಸಿದ್ದಾರೆ.

ಭಾರತ ನಂಬಲಸಾಧ್ಯ ತೆರಿಗೆಯನ್ನು ವಿಧಿಸಿದ್ದು, ಇದು ಬಹುಶಃ ವಿಶ್ವದಲ್ಲೇ ಅತ್ಯಧಿಕ. ಆದರೆ ಭಾರತೀಯ ಸರಕುಗಳನ್ನು ಅಮೆರಿಕದ ಮಾರುಕಟ್ಟೆಗೆ ಇಂಥದ್ದೇ ತಡೆಗಳನ್ನು ವಿಧಿಸದೇ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.

"ಅಮೆರಿಕದ ಸರಕುಗಳ ಮೇಲೆ ಭಾರತ ಪ್ರಚಂಡ ತೆರಿಗೆಯನ್ನು ವಿಧಿಸಿದ್ದು, ಇದು ಬಹುತೇಕ ವಿಶ್ವದಲ್ಲೇ ಅತ್ಯಧಿಕ. ಆದರೆ ಅಮೆರಿಕದ ಮಾರುಕಟ್ಟೆ ಭಾರತೀಯ ಉತ್ಪನ್ನಗಳಿಗೆ ಮುಕ್ತವಾಗಿವೆ. ಆದ್ದರಿಂದ ಋಣಾತ್ಮಕವಾಗಿರುವ ಇದನ್ನು ಮಾಡಬಾರದು ಎಂದು ಅವರು ಹೇಳಿದ್ದಾರೆ.

" ಹಾರ್ಲೆ-ಡೇವಿಡ್ಸನ್ ಭಾರತದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಮೋಟರ್ ಸೈಕಲ್ ಮೇಲೆ 200% ಸುಂಕ ಇದೆ. ಆದ್ದರಿಂದ ಹಾರ್ಲೆ-ಡೇವಿಡ್ಸನ್ ಭಾರತಕ್ಕೆ ಹೋಗಿ ಮೋಟರ್ಸೈಕಲ್ ಘಟಕವನ್ನು ಸ್ಥಾಪಿಸಿದೆ ಹಾಗೂ ಇದೀಗ ಸುಂಕ ತೆರಬೇಕಾಗಿಲ್ಲ" ಎಂದು ಹೇಳಿದ್ದಾರೆ.

ಕೆಳಸ್ತರದ ನ್ಯಾಯಾಲಯ ಟ್ರಂಪ್ ವಿಧಿಸಿದ ಎಲ್ಲ ಸುಂಕಗಳನ್ನು ಕಾನೂನುಬಾಹಿರ ಎಂದು ಘೋಷಿಸಿದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಅವರು ವಿವರಿಸಿದ್ದಾರೆ. ಬಹುಶಃ ನಾಳೆ ಮೇಲ್ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News