×
Ad

ಉಕ್ರೇನ್ ಯುದ್ಧ ಮುಂದುವರಿಸಿದರೆ ಗಂಭೀರ ಪರಿಣಾಮ: ರಶ್ಯಕ್ಕೆ ಟ್ರಂಪ್ ಎಚ್ಚರಿಕೆ

Update: 2025-08-14 21:16 IST

ವಾಷಿಂಗ್ಟನ್, ಆ.14: ಶುಕ್ರವಾರ ನಡೆಯಲಿರುವ ಅಲಾಸ್ಕ ಶೃಂಗಸಭೆಯ ಬಳಿಕವೂ ಉಕ್ರೇನ್‌ ನಲ್ಲಿನ ಯುದ್ಧವನ್ನು ನಿಲ್ಲಿಸಲು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಪ್ಪದಿದ್ದರೆ ತುಂಬಾ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಸೇರಿದಂತೆ ಯುರೋಪಿಯನ್ ನಾಯಕರ ಜೊತೆ ವರ್ಚುವಲ್ ವೇದಿಕೆಯ ಮೂಲಕ ನಡೆಸಿದ ಸಭೆಯ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಝೆಲೆನ್‍ಸ್ಕಿ `ಶಾಂತಿ ಸ್ಥಾಪನೆ ಬಯಸುವುದಾಗಿ ಪುಟಿನ್ ಬುರುಡೆ ಬಿಡುತ್ತಿದ್ದಾರೆ. ಅಲಾಸ್ಕಾ ಸಭೆಗೂ ಮುನ್ನ ಉಕ್ರೇನ್‌ ನ ಮುಂಚೂಣಿ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿಸುವುದು ಅವರ ಉದ್ದೇಶವಾಗಿದೆ. ಸಂಪೂರ್ಣ ಉಕ್ರೇನ್ ಅನ್ನು ಆಕ್ರಮಿಸುವ ಸಾಮಥ್ರ್ಯವಿದೆ ಎಂದು ಬಿಂಬಿಸಲು ಅವರು ಪ್ರಯತ್ನಿಸುತ್ತಿದ್ದಾರೆ' ಎಂದು ಪ್ರತಿಪಾದಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News