ಸ್ವತಂತ್ರ ವಿಶ್ವಕ್ಕೆ ಹೊಸ ನಾಯಕನ ಅಗತ್ಯವಿದೆ: ಟ್ರಂಪ್-ಝೆಲೆನ್‍ಸ್ಕಿ ಜಟಾಪಟಿಗೆ ಇಯು ಪ್ರತಿಕ್ರಿಯೆ
ಟ್ರಂಪ್-ಝೆಲೆನ್‍ಸ್ಕಿ | PTI
ಬ್ರಸೆಲ್ಸ್: ಅಮೆರಿಕ ಮತ್ತು ಉಕ್ರೇನ್ ಅಧ್ಯಕ್ಷರ ನಡುವಿನ ಜಟಾಪಟಿಯ ಬಳಿಕ ಯುರೋಪಿಯನ್ ನಾಯಕರು ಉಕ್ರೇನ್ ಗೆ ಬೆಂಬಲ ಸೂಚಿಸಿರುವಂತೆಯೇ, ಸ್ವತಂತ್ರ ಜಗತ್ತಿಗೆ ಹೊಸ ನಾಯಕರ ಅಗತ್ಯವಿದೆ ಎಂದು ಯುರೋಪಿಯನ್ ಯೂನಿಯನ್(ಇಯು) ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಘೋಷಿಸಿದ್ದಾರೆ.
ಉಕ್ರೇನ್ ಯುರೋಪ್. ನಾವು ಉಕ್ರೇನ್ ಜತೆ ನಿಲ್ಲುತ್ತೇವೆ. ನಾವು ಉಕ್ರೇನ್ ಗೆ ನಮ್ಮ ಬೆಂಬಲವನ್ನು ಹೆಚ್ಚಿಸುತ್ತೇವೆ ಮತ್ತು ಆಕ್ರಮಣಕಾರರ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಸ್ವತಂತ್ರ ಜಗತ್ತಿಗೆ ಹೊಸ ನಾಯಕನ ಅಗತ್ಯವಿದೆ ಎಂಬುದು ಇವತ್ತು ಸ್ಪಷ್ಟವಾಗಿದೆ. ಈ ಸವಾಲನ್ನು ಸ್ವೀಕರಿಸುವುದು ಈಗ ನಮ್ಮ ಹೊಣೆಯಾಗಿದೆ' ಎಂದವರು ಹೇಳಿದ್ದಾರೆ.
`ನಿಮ್ಮ ಘನತೆ ಉಕ್ರೇನ್ ಜನರ ಶೌರ್ಯವನ್ನು ಗೌರವಿಸಿದೆ. ಬಲಿಷ್ಟವಾಗಿರಿ, ಸದೃಢವಾಗಿರಿ. ನೀವು ಒಬ್ಬಂಟಿಯಲ್ಲ. ನ್ಯಾಯಯುತ ಮತ್ತು ಶಾಶ್ವತ ಶಾಂತಿಗಾಗಿ ನಿಮ್ಮೊಂದಿಗೆ ಕೆಲಸ ಮುಂದುವರಿಸುತ್ತೇವೆ' ಎಂದು ಇಯು ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್‍ಡರ್ ಲೆಯೆನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.