×
Ad

ಟರ್ಕಿ: ಕಲುಷಿತ ಮದ್ಯ ಸೇವಿಸಿ 19 ಮಂದಿ ಸಾವು

Update: 2025-01-15 21:35 IST

ಸಾಂದರ್ಭಿಕ ಚಿತ್ರ

ಅಂಕಾರ: ಟರ್ಕಿಯ ಇಸ್ತಾಂಬುಲ್‍ನಲ್ಲಿ ಕಲುಷಿತ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 19ಕ್ಕೇರಿದ್ದು ತೀವ್ರ ಅಸ್ವಸ್ಥಗೊಂಡಿರುವ 43 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.

ಇಸ್ತಾಂಬುಲ್‍ನ ಬೆಸಾಕ್ಸೆಹಿರ್ ಜಿಲ್ಲೆಯಲ್ಲಿ ದುರಂತ ಸಂಭವಿಸಿದ್ದು ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ 50 ಲೀಟರ್‍ಗಳಷ್ಟು ನಕಲಿ ಮದ್ಯ, 36 ಮಾದಕ ವಸ್ತು ಮಾತ್ರೆಗಳು, ಮಾದಕ ವಸ್ತುಗಳ ಐದು ತುಣುಕುಗಳು, ಮಾಪಕ ಯಂತ್ರ, ಅಪೀಮು, ನಕಲಿ ವಲಸೆ ಗುರುತು ಚೀಟಿಗಳು ಹಾಗೂ ಅಪಾರ ಪ್ರಮಾಣದ ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಟ್ಟು 65 ಮಂದಿ ಕಲುಷಿತ ಮದ್ಯ ಸೇವಿಸಿದ್ದು ಇದರಲ್ಲಿ 43 ಮಂದಿ (26 ವಿದೇಶೀಯರು) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News