ಕಾಶ್ಮೀರ ವಿಷಯದಲ್ಲಿ ಮತ್ತೆ ಮಧ್ಯಪ್ರವೇಶಿಸಿದ ಟರ್ಕಿ ಅಧ್ಯಕ್ಷ
ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ | PC : NDTV
ಅಂಕಾರ: ಕಾಶ್ಮೀರ ವಿಷಯದಲ್ಲಿ ಮತ್ತೆ ಮಧ್ಯಪ್ರವೇಶಿಸಿರುವ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೋಗನ್, "ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯವರ್ತಿಯಾಗಿ ತನ್ನ ಪಾತ್ರ ನಿರ್ವಹಿಸಲು ಟರ್ಕಿ ಸಿದ್ಧವಿದೆ" ಎಂದಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಜೊತೆ ಕಾಶ್ಮೀರ ವಿಷಯದ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಸಮಸ್ಯೆಗಳಿಗೆ ಸಮತೋಲಿತ ವಿಧಾನವು ಎರಡೂ ಪಕ್ಷಗಳನ್ನು ಹತ್ತಿರಕ್ಕೆ ತರುತ್ತದೆ ಮತ್ತು ಹೊಸ ಉಲ್ಬಣವನ್ನು ತಡೆಯಲು ಸಹಾಯ ಮಾಡುತ್ತದೆ ಎಂದ ಎರ್ದೋಗನ್ ಅಂತರಾಷ್ಟ್ರೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆಯೊಂದಿಗೆ ಕಾಶ್ಮೀರ ವಿಷಯಕ್ಕೆ ಮಾನವ ಹಕ್ಕು ಆಧಾರಿತ ನಿರ್ಣಯಕ್ಕೆ ಕರೆ ನೀಡಿದ್ದಾರೆ.
`ನಾವು ಶಾಂತಿಯನ್ನು ಬಯಸುತ್ತೇವೆ. ಕೋರಿಕೆ ಬಂದರೆ ಟರ್ಕಿ ತನ್ನ ಪಾತ್ರವನ್ನು ನಿರ್ವಹಿಸಲು ಸಿದ್ಧವಿದೆ. ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ರಚನಾತ್ಮಕ ಪಾಲ್ಗೊಳ್ಳುವಿಕೆಯನ್ನು ಒಳಗೊಂಡಿರುವ ನಿರ್ಣಯಕ್ಕಾಗಿ ನಾವು ಆಶಿಸುತ್ತೇವೆ ಎಂದು ಎರ್ಡೋಗನ್ ಹೇಳಿರುವುದಾಗಿ ವರದಿಯಾಗಿದೆ.