×
Ad

ತರಬೇತಿ ಕಾರ್ಯಾಚರಣೆಯಲ್ಲಿದ್ದ ಎರಡು ಯುದ್ಧವಿಮಾನಗಳು ಪರಸ್ಪರ ಢಿಕ್ಕಿ; 3 ಪೈಲಟ್‍ಗಳು ಮೃತ್ಯು

Update: 2023-08-26 22:50 IST

ಸಾಂದರ್ಭಿಕ ಚಿತ್ರ.| Photo: PTI

ಕೀವ್: ಮಧ್ಯ ಉಕ್ರೇನ್‍ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದ ಎರಡು ತರಬೇತಿ ಯುದ್ಧವಿಮಾನಗಳು ಆಗಸದಲ್ಲಿ ಪರಸ್ಪರ ಢಿಕ್ಕಿಯಾಗಿ ಮೂವರು ಪೈಲಟ್‍ಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಅಮೆರಿಕದ ಎಫ್-16 ಯುದ್ಧವಿಮಾನಗಳನ್ನು ಶೀಘ್ರದಲ್ಲೇ ಪಡೆಯಲಿರುವ ಉಕ್ರೇನ್, ಈ ಹಿನ್ನೆಲೆಯಲ್ಲಿ ತನ್ನ ಪೈಲಟ್‍ಗಳಿಗೆ ತ್ವರಿತವಾಗಿ ತರಬೇತಿ ಪೂರ್ಣಗೊಳಿಸುವ ಯೋಜನೆ ಹೊಂದಿದೆ. ಆದರೆ ಮೂವರು ಪೈಲಟ್‍ಗಳ ಸಾವು ಈ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News