×
Ad

ಇಸ್ರೇಲ್ ದಾಳಿಯಲ್ಲಿ ಇಬ್ಬರು ಗಾಝಾ ಪತ್ರಕರ್ತರ ಹತ್ಯೆ: ಅಲ್ ಜಝೀರಾ

Update: 2024-01-08 08:43 IST

Photo: twitter.com/AJEnglish

ದೋಹಾ: ಗಾಝಾ ಪಟ್ಟಿ ಪ್ರದೇಶದಲ್ಲಿ ಅಲ್ ಜಝೀರಾ ಮಾಧ್ಯಮದ ಇಬ್ಬರು ಫೆಲಸ್ತೀನಿ ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರೂ ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಕತಾರ್ ಮೂಲದ ಮಾಧ್ಯಮ ಸಂಸ್ಥೆ ಹೇಳಿದೆ. ಈ ಪತ್ರಕರ್ತರನ್ನು ಗುರಿ ಮಾಡಿ ಹತ್ಯೆ ಮಾಡಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ.

ಎಎಫ್ ಪಿ ಮತ್ತು ಇತರ ಸುದ್ದಿ ಸಂಸ್ಥೆಗಳಿಗೆ ಕೂಡಾ ವಿಡಿಯೊ ಸ್ಟ್ರಿಂಜರ್ ಗಳಾಗಿ ಕೆಲಸ ಮಾಡುತ್ತಿದ್ದ ಹಂಝಾ ವಹೀಲ್ ದಹ್ದೊ ಮತ್ತು ಮುಸ್ತಾಫಾ ತುರಿಯಾ ತಮ್ಮ ಕರ್ತವ್ಯ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದಾಗ ಇಸ್ರೇಲ್ ಪಡೆಗಳು ದಾಳಿ ನಡೆಸಿವೆ ಎಂದು ಹೇಳಲಾಗಿದೆ. ಇವರ ಜತೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪತ್ರಕರ್ತ ಹಝೇಂ ರಜಬ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವುದನ್ನು ಆರೋಗ್ಯ ಸಚಿವಾಲಯ ಕೂಡಾ ದೃಢಪಡಿಸಿದೆ.

ಕಾರಿನ ಮೇಲೆ ಎರಡು ರಾಕೆಟ್ ದಾಳಿ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಒಂದು ರಾಕೆಟ್ ವಾಹನದ ಮುಂಭಾಗಕ್ಕೆ ಅಪ್ಪಳಿಸಿದರೆ, ಮತ್ತೊಂದು ಚಾಲಕನ ಪಕ್ಕ ಕುಳಿತಿದ್ದ ಹಂಝಾ ಅವರಿಗೆ ತಗುಲಿತು. "ಬಳಿಕ ಛಿದ್ರವಾದ ದೇಹಗಳನ್ನು ಆ್ಯಂಬುಲೆನ್ಸ್ ನಲ್ಲಿ ಸಾಗಿಸಲಾಯಿತು" ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News