×
Ad

ನೌಕಾಪಡೆ ಪರೇಡ್‌ ವೇಳೆ ಎರಡು ಹೆಲಿಕಾಪ್ಟರ್‌ ಢಿಕ್ಕಿ; 10 ಮಂದಿ ಸಾವು

Update: 2024-04-23 12:38 IST

PC : NDTV 

ಕೌಲಾಲಂಪುರ: ಮಂಗಳವಾರ ನಡೆದ ರಾಯಲ್ ಮಲೇಶಿಯನ್ ನೌಕಾಪಡೆಯ ಪರೇಡ್‌ ವೇಳೆ ಎರಡು ಹೆಲಿಕಾಪ್ಟರ್‌ಗಳು ಢಿಕ್ಕಿ ಹೊಡೆದು ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಲೇಶಿಯನ್ ನೌಕಾಪಡೆ ತಿಳಿಸಿದೆ.

ಪಶ್ಚಿಮ ರಾಜ್ಯ ಪೆರಾಕ್‌ನ ಲುಮುಟ್ ನೌಕಾನೆಲೆಯಲ್ಲಿ ಮಂಗಳವಾರ ಬೆಳಗ್ಗೆ 9.32 ಗಂಟೆಗೆ ಅಪಘಾತ ನಡೆದಿದ್ದು, ವಿಮಾನದಲ್ಲಿದ್ದ ಎಲ್ಲಾ 10 ಮಂದಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ನೌಕಾಪಡೆ ತಿಳಿಸಿದೆ.

"10 ಮಂದಿ ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ" ಎಂದು ನೌಕಾಪಡೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News