×
Ad

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇಬ್ಬರು ಪತ್ರಕರ್ತರ ಹತ್ಯೆ : ಹಮಾಸ್ ಹೇಳಿಕೆ

Update: 2024-01-07 19:32 IST

Photo: (PTI)

ಜೆರುಸೆಲೆಂ: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಎಎಫ್ ಪಿ ಸಂಸ್ಥೆಯ ವೀಡಿಯೋ ಪತ್ರಕರ್ತ ಮುಸ್ತಫಾ ತುರಿಯಾ ಹಾಗೂ ಅಲ್ ಜಝೀರಾದ ಪತ್ರಕರ್ತ ಹಂಝಾ ವೇಲ್ ದಹದೌಹ್ ಅವರು ಮೃತಪಟ್ಟಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಝಾದಲ್ಲಿನ ಆರೋಗ್ಯ ಸಚಿವಾಲಯ ರವಿವಾರ ತಿಳಿಸಿದೆ.

ಪತ್ರಕರ್ತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೊಲ್ಲಲ್ಪಟ್ಟರು ಎಂದು ಸಚಿವಾಲಯ ಮತ್ತು ವೈದ್ಯರು ತಿಳಿಸಿದ್ದಾರೆ. ಹಂಝಾ ಅವರ ತಂದೆ ವೇಲ್ ಅಲ್-ದಹದೌಹ್ ಅವರು ಗಾಝಾ ಪಟ್ಟಿಯಲ್ಲಿರುವ ಅಲ್ ಜಝೀರಾದ ಬ್ಯೂರೋ ಮುಖ್ಯಸ್ಥರಾಗಿದ್ದಾರೆ. ಇತ್ತೀಚೆಗೆ ಗಾಝಾ ಪಟ್ಟಿಯಲ್ಲಿ ದಾಳಿಯಲ್ಲಿ ಅವರು ಗಾಯಗೊಂಡಿದ್ದರು. ತುರಿಯಾ 2019 ರಿಂದ ಎಎಫ್ಪಿ ಸುದ್ದಿ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದರು.

ನ್ಯೂಯಾರ್ಕ್ ಮೂಲದ ಪತ್ರಕರ್ತರ ಹಕ್ಕುಗಳಿಗಾಗಿ ಹೋರಾಡುವ ಸಂಸ್ಥೆಯೊಂದರ ಪ್ರಕಾರ 2023, ಡಿಸೆಂಬರ್ 31ರ ಅಂತ್ಯಕ್ಕೆ ಅಕ್ಟೋಬರ್ 7 ರಿಂದ ಆರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಿಂದಾಗಿ 77 ಮಂದಿ ಪತ್ರಕರ್ತರು ಕೊಲ್ಲಲ್ಪಟಿದ್ದಾರೆ. ಅವರರಲ್ಲಿ 70 ಮಂದಿ ಫೆಲೆಸ್ತೀನಿಯರು, 4 ಮಂದಿ ಇಸ್ರೇಲ್ ಮೂಲದವರು. 3 ಮಂದಿ ಲೆಬನಾನ್ ನವರು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News