×
Ad

ಉಕ್ರೇನ್: ರಶ್ಯದ ಕ್ಷಿಪಣಿ ದಾಳಿಯಲ್ಲಿ 3 ಮಂದಿ ಸಾವು

Update: 2025-03-06 21:12 IST

ಸಾಂದರ್ಭಿಕ ಚಿತ್ರ | PTI

ಕೀವ್: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಅವರ ಹುಟ್ಟೂರಿನ ಮೇಲೆ ಬುಧವಾರ ತಡರಾತ್ರಿ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ 3 ಮಂದಿ ಸಾವನ್ನಪ್ಪಿದ್ದು ಇತರ 31 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಕ್ರಿವಿ ರಿಗ್ ನಗರದ ಹೋಟೆಲ್ ಮೇಲೆ ಕ್ಷಿಪಣಿ ಅಪ್ಪಳಿಸಿದ್ದು 3 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡ 31 ಮಂದಿಯಲ್ಲಿ 14 ಮಂದಿಯ ಸ್ಥಿತಿ ಗಂಭೀರವಾಗಿದೆ. ಹೋಟೆಲ್ ಕಟ್ಟಡಕ್ಕೆ ಹಾನಿಯಾಗಿದ್ದು ಸಮೀಪದ 14 ಅಪಾರ್ಟ್‍ಮೆಂಟ್ ಕಟ್ಟಡಗಳು, ಅಂಚೆ ಕಚೇರಿ, 12 ಕಾರುಗಳು, ಸಾಂಸ್ಕøತಿಕ ಸಂಸ್ಥೆ, 12 ಅಂಗಡಿಗಳಿಗೂ ಹಾನಿಯಾಗಿದೆ ಎಂದು ನಿಪ್ರೊಪೆಟ್ರಾವ್ಸ್ಕ್ ಪ್ರಾಂತದ ಗವರ್ನರ್ ಸೆರ್ಗಿಯ್ ಲಿಸಾಕ್ ಹೇಳಿದ್ದಾರೆ. ಬುಧವಾರ ಸುಮಿ ನಗರದ ಉಗ್ರಾಣದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News