×
Ad

ಕ್ರಿಮಿಯಾದ ಮೇಲೆ ದಾಳಿಗೆ ಉಕ್ರೇನ್ ಯತ್ನ | 33 ಡ್ರೋನ್ ಗಳನ್ನು ಹೊಡೆದುರುಳಿಸಿದ ರಷ್ಯ ಸೇನೆ

Update: 2024-07-18 21:40 IST

  ಸಾಂದರ್ಭಿಕ ಚಿತ್ರ

ಮಾಸ್ಕೋ : ಕ್ರಿಮಿಯಾ ಪರ್ಯಾಯ ದ್ವೀಪದ ಮೇಲೆ ರಾತ್ರೋರಾತ್ರಿ ದಾಳಿ ನಡೆಸಲು ಯತ್ನಿಸಿದ ಉಕ್ರೇನ್ ನ 33 ವೈಮಾನಿಕ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆಯೆಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ. ಕ್ರಿಮಿಯಾದೆಡೆಗೆ ಧಾವಿಸುತ್ತಿದ್ದ ಇತರ 10 ಉಕ್ರೇನಿ ನೌಕಾಪಡೆಯ ಡ್ರೋನ್ ಗಳನ್ನು ಕಪ್ಪು ಸಮುದ್ರದಲ್ಲಿ ಪತನಗೊಳಿಸಿರುವುದಾಗಿ ಅದು ಹೇಳಿದೆ.

ಪಶ್ಚಿಮ ರಶ್ಯದ ಬಿಯಾನ್ಸ್ಕ್ ಪ್ರಾಂತದಲ್ಲಿ ರಾತ್ರೋರಾತ್ರಿ ನಡೆದ ದಾಳಿಯಲ್ಲಿ ಎರಡು ಡ್ರೋನ್ ಗಳನ್ನು ಕೂಡಾ ತಟಸ್ಥಗೊಳಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. ಆದರೆ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ಸ್ಥಳೀಯ ಗವರ್ನರ್ ಬೊಗೊಮಾಝ್ ತಿಳಿಸಿದ್ದಾರೆ.

ರಶ್ಯದ ಪ್ರಾಂತವಾದ ಕ್ರಿಮಿಯಾದ ಮೇಲೆ ಉಕ್ರೇನ್ ತನ್ನ ದಾಳಿಗನ್ನು ತೀವ್ರಗೊಳಿಸಿದೆ. ಕ್ರಿಮಿಯಾ ಗಡಿಯಲ್ಲಿರುವ ಗ್ರಾಮಗಳು ಹಾಗೂ ಪಟ್ಟಣಗಳ ಮೇಲಲ್ಲದೆ ರಶ್ಯದ ಸೇನೆಗೆ ಇಂಧನ ಪೂರೈಕೆ ಮಾಡುತ್ತಿರುವ ಇಂಧನ ಸ್ಥಾವರಗಳ ಮೇಲೆಯೂ ಅದು ದಾಳಿಯನ್ನು ತೀವ್ರಗೊಳಿಸಿದೆ.

2022ರ ಫೆಬ್ರವರಿಯಲ್ಲಿ ರಶ್ಯದ ಮೇಲೆ ಉಕ್ರೇನ್ ಆಕ್ರಮಣ ನಡೆಸಿದಾಗಿನಿಂದ ಎರಡೂ ದೇಶಗಳು ಪರಸ್ಪರರ ಮೇಲೆ ದಾಳಿಗೆ ಡ್ರೋನ್ಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News