×
Ad

ಭಾರತದಿಂದ ಡೀಸೆಲ್ ಆಮದು ನಿರ್ಬಂಧಿಸಲು ಉಕ್ರೇನ್ ನಿರ್ಧಾರ: ವರದಿ

Update: 2025-09-16 00:01 IST

PC : Reuters

ಕೀವ್, ಸೆ.15: ರಶ್ಯದಿಂದ ಗಮನಾರ್ಹ ಕಚ್ಛಾತೈಲ ಖರೀದಿಸುತ್ತಿರುವ ಭಾರತದಿಂದ ಆಮದಾಗುವ ಡೀಸೆಲ್ ಮೇಲೆ ಅಕ್ಟೋಬರ್ 1ರಿಂದ ನಿರ್ಬಂಧ ವಿಧಿಸಲು ಉಕ್ರೇನ್ ನಿರ್ಧರಿಸಿದೆ ಎಂದು ಉಕ್ರೇನ್‍ನ ಇಂಧನ ಕನ್ಸಲ್ಟೆನ್ಸಿ ಸಂಸ್ಥೆ `ಎನ್‍ಕೋರ್' ಸೋಮವಾರ ಹೇಳಿದೆ.

ಭಾರತದಿಂದ ಆಮದಾಗುವ ಡೀಸೆಲ್ ಇಂಧನದಲ್ಲಿ ರಶ್ಯದ ಘಟಕಾಂಶಗಳ ಉಪಸ್ಥಿತಿಯನ್ನು ಪರಿಶೀಲಿಸಲು ಎಲ್ಲಾ ಸರಕುಗಳನ್ನೂ ಪ್ರಯೋಗಾಲಯದ ವಿಶ್ಲೇಷಣೆಗೆ ಒಳಪಡಿಸಬೇಕು ಎಂದು ಉಕ್ರೇನ್‍ನ ಭದ್ರತಾ ಸಂಸ್ಥೆಗಳು ಆದೇಶಿಸಿವೆ.

ಆಗಸ್ಟ್ ನಲ್ಲಿ ಉಕ್ರೇನ್ 1,19,000 ಟನ್‍ ಗಳಷ್ಟು ಭಾರತೀಯ ಡೀಸೆಲ್ ಇಂಧನವನ್ನು ಆಮದು ಮಾಡಿಕೊಂಡಿದ್ದು ಇದು ಉಕ್ರೇನ್‍ನ ಒಟ್ಟು ಡೀಸೆಲ್ ಆಮದಿನ 18%ದಷ್ಟಾಗಿದೆ' ಎಂದು ಎನ್‍ಕೋರ್ ಹೇಳಿದೆ.

2022ರಲ್ಲಿ ರಶ್ಯದೊಂದಿಗೆ ಪೂರ್ಣ ಪ್ರಮಾಣದ ಯುದ್ಧ ಆರಂಭಗೊಳ್ಳುವುದಕ್ಕೂ ಮುನ್ನ ಉಕ್ರೇನ್ ಪ್ರಮುಖವಾಗಿ ರಶ್ಯ ಮತ್ತು ಬೆಲಾರುಸ್‍ ನಿಂದ ಡೀಸೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News