×
Ad

ಉಕ್ರೇನ್ ಡ್ರೋನ್ ದಾಳಿಯ ಬಳಿಕ ರಶ್ಯದ ಶಸ್ತ್ರಾಗಾರದಲ್ಲಿ ಭಾರೀ ಸ್ಫೋಟ : ವರದಿ

Update: 2024-09-18 22:04 IST

ಸಾಂದರ್ಭಿಕ ಚಿತ್ರ - AI

ಕೀವ್ : ಉಕ್ರೇನ್ ನಡೆಸಿದ ಬೃಹತ್ ಪ್ರಮಾಣದ ಡ್ರೋನ್ ದಾಳಿಯ ಬಳಿಕ ಟೆವರ್ ವಲಯದಲ್ಲಿರುವ ರಶ್ಯದ ಪ್ರಮುಖ ಶಸ್ತ್ರಾಗಾರದಲ್ಲಿ ಭೂಕಂಪದಷ್ಟು ಪ್ರಮಾಣದ ಭಾರೀ ಸ್ಫೋಟ ಸಂಭವಿಸಿದ್ದು ಸಮೀಪದ ನಗರದ ನಿವಾಸಿಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಫೋಟದ ತೀವ್ರತೆಗೆ ರಶ್ಯ ರಾಜಧಾನಿ ಮಾಸ್ಕೋದಿಂದ ಸುಮಾರು 380 ಕಿ.ಮೀ ಪಶ್ಚಿಮದಲ್ಲಿರುವ ಸರೋವರದಲ್ಲಿ ಕಂಪನ ಹಾಗೂ ದೊಡ್ಡ ಚೆಂಡಿನ ಗಾತ್ರದ ಬೆಂಕಿಯ ಚೆಂಡು ಆಗಸಕ್ಕೆ ಸಿಡಿಯುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ.

ಸುಮಾರು 14 ಚದರ ಕಿ.ಮೀ ಪ್ರದೇಶದಿಂದ ತೀವ್ರವಾದ ಶಾಖದ ಮೂಲಗಳು ಹೊರಹೊಮ್ಮುವುದನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ `ನಾಸಾ'ದ ಉಪಗ್ರಹಗಳು ರವಾನಿಸಿದ ಚಿತ್ರಗಳು ದೃಢಪಡಿಸಿವೆ. ಜತೆಗೆ, ಭೂಕಂಪನ ಮೇಲ್ವಿಚಾರಣಾ ಕೇಂದ್ರಗಳ ಸೆನ್ಸಾರ್‍ಗಳು ಈ ಪ್ರದೇಶದಲ್ಲಿ ಭೂಕಂಪನದ ಸಂದೇಶ ನೀಡಿವೆ ಎಂದು ವರದಿಯಾಗಿದೆ. ಟೆವರ್ ವಲಯದ ಟೊರೊಪೆಟ್ಸ್ ಪ್ರದೇಶದಲ್ಲಿರುವ ಶಸ್ತ್ರಾಸ್ತ್ರ ಡಿಪೋದ ಮೇಲೆ ಶತ್ರುಗಳು ದಾಳಿ ನಡೆಸಿದ್ದಾರೆ. ಸಾವು-ನೋವಿನ ಮಾಹಿತಿಯಿಲ್ಲ ' ಎಂದು ರಶ್ಯದ ಮಿಲಿಟರಿ ಬ್ಲಾಗರ್(ಬ್ಲಾಗ್ ಬರಹಗಾರ) ಯೂರಿ ಪೊಡೊಲ್ಯಕ ಹೇಳಿದ್ದಾರೆ.

ಉಕ್ರೇನ್‍ನ ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಡ್ರೋನ್ ದಾಳಿಯ ಬಳಿಕ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸಲಾಗಿದ್ದು ಕೆಲವು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಟೆವರ್ ಪ್ರಾಂತದ ಗವರ್ನರ್ ಇಗೋರ್ ರುಡೆನ್ಯಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News