×
Ad

ಉಕ್ರೇನ್ - ರಶ್ಯ ಯುದ್ಧ | ಉಕ್ರೇನಿನ 117 ಡ್ರೋನ್‌ ಹೊಡೆದುರಳಿಸಿದ ರಶ್ಯ

Update: 2024-08-14 17:00 IST

ಸಾಂದರ್ಭಿಕ ಚಿತ್ರ

ಮಾಸ್ಕೋ : ಕುರ್ಸ್ಕ್‌ ಸೇರಿದಂತೆ ಇತರೆ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ಹಾರಿಸಿದ್ದ 117 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಶ್ಯ ಮಿಲಿಟರಿ ಪಡೆ ಹೇಳಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉಕ್ರೇನ್ ಮತ್ತು ರಶ್ಯ ನಡುವೆ ನಡೆಯುತ್ತಿರುವ ಯುದ್ಧವು ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಕುರ್ಸ್ಕ್ ಪ್ರದೇಶವೊಂದರಲ್ಲೇ ಕ್ಷಿಪಣಿಗಳು ಮತ್ತು 37 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ.

ಇದಕ್ಕೆ ಪ್ರತಿಕಾರವಾಗಿ, ರಶ್ಯ ಹಾರಿಸಿದ್ದ 23 ಡ್ರೋನ್‌ ಗಳ ಪೈಕಿ 17 ಅನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ವಾಯುಪಡೆ ತಿಳಿಸಿದೆ. ಉಕ್ರೇನ್‌ ನ ವಿವಿಧೆಡೆ ಕಟ್ಟಡಗಳಿಗೆ ಡ್ರೋನ್ ದಾಳಿಯಿಂದ ಹಾನಿಯಾಗಿರುವ ಬಗ್ಗೆ ಸ್ಥಳೀಯ ಆಡಳಿತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News