×
Ad

ಇಸ್ರೇಲ್-ಹಮಾಸ್‌ ಸಂಘರ್ಷ ಖಂಡಿಸಿ ರಶ್ಯ ನಿರ್ಣಯವನ್ನು ತಿರಸ್ಕರಿಸಿದ ವಿಶ್ವ ಸಂಸ್ಥೆ ಭದ್ರತಾ ಮಂಡಳಿ

Update: 2023-10-17 17:10 IST

Photo: PTI

ಹೊಸದಿಲ್ಲಿ: ಇಸ್ರೇಲ್-ಹಮಾಸ್‌ ನಡುವಿನ ಸಂಘರ್ಷವನ್ನು ಖಂಡಿಸಿ ರಶ್ಯಾದ ನಿರ್ಣಯವನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ತಿರಸ್ಕರಿಸಿದೆ. ಕನಿಷ್ಠ 1400 ಜನರ ಸಾವಿಗೆ ಕಾರಣವಾದ ಇಸ್ರೇಲ್‌ ಮೇಲಿನ ದಾಳಿಗೆ ಹಮಾಸ್‌ ಅನ್ನು ದೂರದೇ ರಶ್ಯ ಮಂಡಿಸಿರುವ ಈ ನಿರ್ಣಯವನ್ನು ಬೆಂಬಲಿಸಲು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ನಿರಾಕರಿಸಿವೆ.

ರಶ್ಯಾದ ಪ್ರಸ್ತಾವನೆಗೆ ನಾಲ್ಕು ದೇಶಗಳು ಮಾತ್ರ ಬೆಂಬಲಿಸಿದರೆ ಅಮೆರಿಕ, ಬ್ರಿಟನ್‌ ಸಹಿತ ಇತರ ನಾಲ್ಕು ರಾಷ್ಟ್ರಗಳು ತಿರಸ್ಕರಿಸಿವೆ ಹಾಗೂ ಆರು ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.

ರಶ್ಯಾದ ನಿರ್ಣಯ ತಿರಸ್ಕೃತಗೊಂಡಿರುವ ಹೊರತಾಗಿಯೂ ಸೂಕ್ತ ಕ್ರಮಕೈಗೊಳ್ಳಲು ಅದು ಭದ್ರತಾ ಮಂಡಳಿಯನ್ನು ಪ್ರೇರೇಪಿಸಿದೆ ಎಂದು ರಶ್ಯಾದ ವಿಶ್ವ ಸಂಸ್ಥೆಯ ರಾಯಭಾರಿ ವಸ್ಸಿಲಿ ನೆಬೆನ್ಝಿಯಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News