ಕೆಂಪು ಸಮುದ್ರದಲ್ಲಿ ಕೇಬಲ್ ಕಡಿತ: ಭಾರತ, ಪಾಕ್, ಮಧ್ಯಪ್ರಾಚ್ಯದಲ್ಲಿ ಇಂಟರ್ ನೆಟ್ ಗೆ ಅಡ್ಡಿ
Update: 2025-09-07 23:34 IST
AI image
ಅಬುಧಾಬಿ, ಸೆ.7: ಕೆಂಪು ಸಮುದ್ರದಲ್ಲಿ ಸಮುದ್ರದಡಿಯ ಕೇಬಲ್ ಕಡಿತಗೊಂಡು ಭಾರತ, ಪಾಕಿಸ್ತಾನ, ಯುಎಇ ಸೇರಿದಂತೆ ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಇಂಟರ್ ನೆಟ್ ವ್ಯವಸ್ಥೆಗೆ ಅಡ್ಡಿಯಾಗಿರುವುದಾಗಿ `ದಿ ಅಸೋಸಿಯೇಟೆಡ್ ಪ್ರೆಸ್' ರವಿವಾರ ವರದಿ ಮಾಡಿದೆ.
ಸಮುದ್ರದಡಿಯ ಕೇಬಲ್ ನಿಲುಗಡೆಗಳ ಸರಣಿಯು ಅನೇಕ ದೇಶಗಳಲ್ಲಿ ಇಂಟರ್ ನೆಟ್ ಸಂಪರ್ಕಕ್ಕೆ ಸಮಸ್ಯೆಯೊಡ್ಡಿದೆ. ವೈಫಲ್ಯಗಳು ಸೌದಿ ಅರೆಬಿಯಾದ ಜೆಡ್ಡಾ ಬಳಿಯ ಎಸ್‍ಎಂಡಬ್ಯ್ಲೂ4 ಮತ್ತು ಐಎಂಇಡಬ್ಲ್ಯೂಇ ಕೇಬಲ್ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿವೆ' ಎಂದು ಮೇಲ್ವಿಚಾರಣಾ ಗುಂಪು ನೆಟ್‍ಬ್ಲಾಕ್ಸ್ ಪ್ರತಿಪಾದಿಸಿದೆ. ತನ್ನ ಅಝೂರ್ ಕ್ಲೌಡ್ ಸೇವೆಯು ಅಡೆತಡೆಗಳನ್ನು ಅನುಭವಿಸಿರುವುದಾಗಿ ಮೈಕ್ರೋಸಾಫ್ಟ್ ದೃಢಪಡಿಸಿದೆ.