×
Ad

ಅಮೆರಿಕ | ಕಾರ್ಗೊ ವಿಮಾನ ಅಪಘಾತ: 7 ಮಂದಿ ಮೃತ್ಯು

ಅಪಘಾತದ ಭಯಾನಕ ವೀಡಿಯೊ ವೈರಲ್

Update: 2025-11-05 18:19 IST

PC - @sentdefender/X

ಲೂಯಿಸ್ ವಿಲ್ಲೆ (ಅಮೆರಿಕ): ಯುಪಿಎಸ್ ಕಾರ್ಗೊ ವಿಮಾನವೊಂದು ಇಲ್ಲಿನ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡುವ ವೇಳೆ ಅಪಘಾತಕ್ಕೀಡಾಗಿದ್ದು, ಈ ಘಟನೆಯಲ್ಲಿ ಏಳು ಮಂದಿ ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ ಎಂದು ವಿಮಾನ ನಿಲ್ದಾಣದ ಪ್ರಾಧಿಕಾರಗಳು ತಿಳಿಸಿವೆ.

ಈ ಅಪಘಾತದ ನಂತರ, ಎಲ್ಲ ವಿಮಾನಗಳ ನಿರ್ಗಮನವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಸುಮಾರು 5.15 ಗಂಟೆಗೆ ಹೊನೊಲುಲುವಿನಿಂದ ಈ ವಿಮಾನ ನಿರ್ಗಮಿಸುವಾಗ ಈ ಅಪಘಾತ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮಾಹಿತಿ ನೀಡಿದೆ.

ಈ ಅಪಘಾತದ ವೀಡಿಯೊ ವೈರಲ್ ಆಗಿದ್ದು, ಅಪಘಾತಕ್ಕೀಡಾದ ವಿಮಾನದಿಂದ ಭಾರಿ ಬೆಂಕಿಯ ಜ್ವಾಲೆ ಮತ್ತು ಹೊಗೆ ಹೊರಬರುತ್ತಿರುವುದು ಸೆರೆಯಾಗಿದೆ. ವಿಮಾನವು ನೆಲಕ್ಕೆ ಅಪ್ಪಳಿಸುವ ಮುಂಚೆಯೇ ಬೆಂಕಿಯುಂಡೆಯಂತಾಗಿರುವುದೂ ಈ ವೀಡಿಯೊದಲ್ಲಿ ದಾಖಲಾಗಿದೆ. ವಿಮಾನ ಅಪಘಾತಕ್ಕೀಡಾದ ನಂತರ, ಹಲವು ಕಟ್ಟಡಗಳಿಗೂ ಬೆಂಕಿ ಹೊತ್ತಿಕೊಂಡಿತು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News