ಯೆಮನ್: ಅಮೆರಿಕದ ದಾಳಿಯಲ್ಲಿ ಇಬ್ಬರ ಮೃತ್ಯು; 11 ಮಂದಿಗೆ ಗಾಯ
Update: 2025-04-20 23:15 IST
ಸನಾ: ಯೆಮನ್ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ರಾಜಧಾನಿ ಸನಾ ಹಾಗೂ ಸುತ್ತಮುತ್ತಲಿನ ಪ್ರದೇಶದ ಮೇಲೆ ಶನಿವಾರ ರಾತ್ರಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು ಇತರ 11 ಮಂದಿ ಗಾಯಗೊಂಡಿರುವುದಾಗಿ ಯೆಮನ್ನ ಆರೋಗ್ಯ ಇಲಾಖೆ ರವಿವಾರ ಹೇಳಿದೆ.
ಸನಾ ಪ್ರಾಂತದ ಬನಿ ಮತರ್ ಪ್ರದೇಶದಲ್ಲಿ ಅಮೆರಿಕದ ವೈಮಾನಿಕ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಮರೀಬ್ ಮತ್ತು ಅಮ್ರಾನ್ ಪ್ರಾಂತದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು 11 ಮಂದಿ ಗಾಯಗೊಂಡಿರುವುದಾಗಿ ವರದಿ ಹೇಳಿದೆ.