×
Ad

ಪೂರ್ವ ಸಿರಿಯಾದ ಮೇಲೆ ಅಮೆರಿಕದ ವೈಮಾನಿಕ ದಾಳಿ

Update: 2023-10-27 23:53 IST

Photo : twitter/jacksonhinklle

ವಾಷಿಂಗ್ಟನ್: ಪೂರ್ವ ಸಿರಿಯಾದಲ್ಲಿ ಇರಾನ್‍ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಮತ್ತು ಅದಕ್ಕೆ ಸಂಜೋಜನೆಗೊಂಡಿರುವ ತಂಡಗಳ ನೆಲೆಯನ್ನು ಗುರಿಯಾಗಿಸಿ ಅಮೆರಿಕದ ಪಡೆ ವೈಮಾನಿಕ ದಾಳಿ ನಡೆಸಿರುವುದಾಗಿ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.

ಇರಾಕ್ ಮತ್ತು ಸಿರಿಯಾದಲ್ಲಿರುವ ಅಮೆರಿಕದ ಸೇನಾ ಸಿಬಂದಿಗಳನ್ನು ಗುರಿಯಾಗಿಸಿ ಅಕ್ಟೋಬರ್ 17ರಿಂದ ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಪಡೆ ನಡೆಸುತ್ತಿರುವ ಬಹುತೇಕ ವಿಫಲ ದಾಳಿಗಳಿಗೆ ಪ್ರತಿಯಾಗಿ ಅಮೆರಿಕದ ನಿಖರ ಗುರಿಯ ವೈಮಾನಿಕ ಪಡೆ ಈ ದಾಳಿ ನಡೆಸಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News