ಬಾಯ್ತಪ್ಪಿ "ಇಸ್ರೇಲ್ ಭಯೋತ್ಪಾದನೆಯನ್ನು ಹರಡುತ್ತಿದೆ" ಎಂದು ಹೇಳಿದ ಅಮೆರಿಕದ ರಾಯಭಾರಿ!
Update: 2025-06-21 14:05 IST
ಅಮೆರಿಕದ ರಾಯಭಾರಿ ಡೊರೊಥಿ ಶಿಯಾ (Photo credit: aljazeera.com)
ನ್ಯೂಯಾರ್ಕ್: ಮಧ್ಯ ಪ್ರಾಚ್ಯದಾದ್ಯಂತ ಇಸ್ರೇಲ್ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಬಾಯಿ ತಪ್ಪಿ ಹೇಳುವ ಮೂಲಕ ಅಮೆರಿಕದ ರಾಯಭಾರಿ ಡೊರೊಥಿ ಶಿಯಾ ಮುಜುಗರದ ಸನ್ನಿವೇಶ ಎದುರಿಸಿದ ಘಟನೆ ನಡೆದಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ನೀಡಿದ ಹೇಳಿಕೆಯಲ್ಲಿ ಶಿಯಾ ಅವರಿಂದ ಬಾಯಿತಪ್ಪಿ ಈ ಹೇಳಿಕೆ ಬಂದಿದೆ. ಇಸ್ರೇಲ್ ಮಧ್ಯಪ್ರಾಚ್ಯದಾದ್ಯಂತ ಅವ್ಯವಸ್ಥೆ, ಭಯೋತ್ಪಾದನೆ ಮತ್ತು ಸಂಕಟವನ್ನು ಹರಡಿದೆ ಎಂದು ಆಕಸ್ಮಿಕವಾಗಿ ಹೇಳಿದ ನಂತರ ಅಮೆರಿಕದ ರಾಯಭಾರಿ ಡೊರೊಥಿ ಶಿಯಾ ತಮ್ಮನ್ನು ತಾವು ಸರಿಪಡಿಸಿಕೊಂಡರು.
ಡೊರೊಥಿ ಶಿಯಾ ಇಸ್ರೇಲ್‌ನೊಂದಿಗಿನ ಸಂಘರ್ಷಕ್ಕೆ ಇರಾನ್ ಅನ್ನು ದೂಷಿಸಿದರು. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ನಿಗ್ರಹಿಸಲು ಒಪ್ಪಂದಕ್ಕೆ ಒಪ್ಪಿಕೊಳ್ಳಬೇಕಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.