×
Ad

ಟೆಲ್ ಅವೀವ್ ನಲ್ಲಿ ಒತ್ತೆಯಾಳುಗಳ ಕುಟುಂಬಗಳನ್ನು ಭೇಟಿಯಾದ ಅಮೆರಿಕ ರಾಯಭಾರಿ

Update: 2025-08-02 22:46 IST

PC : arabnews.com 

ಟೆಲ್ ಅವೀವ್: ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರು ಟೆಲ್ ಅವೀವ್ ನಲ್ಲಿ ಒತ್ತೆಯಾಳುಗಳ ಕುಟುಂಬಗಳನ್ನು ಭೇಟಿ ಮಾಡಿ, ಅವರ ನೋವುಗಳನ್ನು ಆಲಿಸಿದರು.

ಅಕ್ಟೋಬರ್ 2023ರಂದು ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಿ, ಹಲವಾರು ಇಸ್ರೇಲ್ ನಾಗರಿಕರನ್ನು ಹತ್ಯೆಗೈದು ಹಾಗೂ ಮತ್ತೆ ಕೆಲವರನ್ನು ಒತ್ತೆಯಾಳುಗಳನ್ನಾಗಿಸಿಕೊಂಡಿದೆ. ಆ ಬಳಿಕ ಸುಮಾರು ಎರಡು ವರ್ಷಗಳಿಂದ ಗಾಝಾದ ಮೇಲೆ ಇಸ್ರೇಲ್ ಯುದ್ಧ ನಡೆಸುತ್ತಿದೆ. ಈ ನಡುವೆ, ಒತ್ತೆಯಾಳುಗಳ ಕುಟುಂಬಗಳು ಈಗಲೂ ತಮ್ಮ ಪ್ರೀತಿಪಾತ್ರರ ಸುರಕ್ಷಿತ ಬಿಡುಗಡೆಗಾಗಿ ಆತಂಕದಿಂದ ಎದುರು ನೋಡುತ್ತಿವೆ. ಈ ಕುಟುಂಬಗಳನ್ನು ಶನಿವಾರ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಭೇಟಿಯಾದರು.

ಸ್ಟೀವ್ ವಿಟ್ಕಾಫ್ ಅವರು ಒತ್ತೆಯಾಳುಗಳ ಕುಟುಂಬಗಳ ಸದಸ್ಯರೊಂದಿಗೆ ಗುಪ್ತ ಮಾತುಕತೆಗೆ ತೆರಳುವುದಕ್ಕೂ ಮುನ್ನ, ಟೆಲ್ ಅವೀವ್ ನಲ್ಲಿ ನೆರೆದಿದ್ದ ನೂರಾರು ಪ್ರತಿಭಟನಾಕಾರರು ಅವರಿಗೆ ಶುಭಾಶಯ ಕೋರಿದರು. ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ನೆರವು ಒದಗಿಸುವಂತೆ ಮನವಿ ಮಾಡಿದರು.

ಒತ್ತೆಯಾಳುಗಳ ಕುಟುಂಬದ ಸದಸ್ಯರೊಂದಿಗಿನ ಸ್ವೀವ್ ವಿಟ್ಕಾಫ್ ಅವರ ಮಾತುಕತೆ ಪ್ರಗತಿಯಲ್ಲಿದೆ ಎಂದು ಒತ್ತೆಯಾಳುಗಳು ಹಾಗೂ ನಾಪತ್ತೆಯಾಗಿರುವ ಕುಟುಂಬಗಳ ವೇದಿಕೆ ದೃಢಪಡಿಸಿದ್ದು, ವಿಟ್ಕಾಫ್ ತಮ್ಮ ಬಳಿಗೆ ಆಗಮಿಸಿದಾಗ, ‘ಅವರನ್ನು ಮನೆಗೆ ಕರೆ ತನ್ನಿ” ಹಾಗೂ “ನಮಗೆ ನಿಮ್ಮ ನೆರವು ಬೇಕಾಗಿದೆ” ಎಂದು ಒತ್ತೆಯಾಳುಗಳ ಕುಟುಂಬಗಳು ಘೋಷಣೆ ಕೂಗಿದ ವಿಡಿಯೊಗಳನ್ನು ಹಂಚಿಕೊಂಡಿದೆ.

ಯುದ್ಧದಲ್ಲಿ ಬಹುತೇಕ ನಾಶಗೊಂಡಿರುವ ಫೆಲೆಸ್ತೀನ್ ಪ್ರಾಂತ್ಯಕ್ಕೆ ಆಹಾರ ಸಾಮಗ್ರಿಯನ್ನು ಪೂರೈಸುವ ಅಮೆರಿಕ ಬೆಂಬಲಿತ ನೆರವು ಕೇಂದ್ರಕ್ಕೆ ವಿಟ್ಕಾಫ್ ಭೇಟಿ ನೀಡಿದ ಮರುದಿನವೇ ಅವರು ಒತ್ತೆಯಾಳುಗಳ ಕುಟುಂಬಗಳನ್ನು ಭೇಟಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News