ಅಮೆರಿಕ: ವಸತಿ ಪ್ರದೇಶದಲ್ಲಿ ಬೆಂಕಿ ದುರಂತ; 9 ಮಂದಿ ಮೃತ್ಯು
Update: 2025-07-14 23:04 IST
PC | Reuters
ನ್ಯೂಯಾರ್ಕ್, ಜು.14: ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದ ಜನವಸತಿ ಕಟ್ಟಡ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದು ಕನಿಷ್ಠ 30 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ರವಿವಾರ ರಾತ್ರಿ ಸುಮಾರು 10 ಗಂಟೆಗೆ ವಸತಿ ಕಟ್ಟಡ ಸಮುಚ್ಛಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಮಾತ್ರದಲ್ಲಿ ಹೊಗೆಯ ಕಾರ್ಮೋಡ ಆವರಿಸಿದೆ. ಮನೆಯೊಳಗಿಂದ ಹೊರ ಬರಲಾಗದೆ ಕಿಟಕಿ ಬಾಗಿಲಿಂದ ಕೆಲವರು ಕೆಳಗೆ ಹಾರಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದು ಸೋಮವಾರ ಬೆಳಿಗ್ಗೆ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಕಟ್ಟಡದಲ್ಲಿ ಸುಮಾರು 70 ಮಂದಿ ವಾಸಿಸುತ್ತಿದ್ದು ಕನಿಷ್ಠ 9 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.