×
Ad

ಸ್ಯಾನ್‌ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಫಿಜಿ ಏರ್‌ವೇಸ್‌ ವಿಮಾನದಲ್ಲಿ ದಿಢೀರ್‌ ಅಸ್ವಸ್ಥಗೊಂಡು ಅಮೆರಿಕಾದ ಪ್ರಯಾಣಿಕ ಮೃತ್ಯು

Update: 2024-06-13 10:42 IST

Photo: ndtv

ಸ್ಯಾನ್‌ ಫ್ರಾನ್ಸಿಸ್ಕೋ: ಫಿಜಿ ದೇಶದ ನಾಡಿ ನಗರದಿಂದ ಸ್ಯಾನ್‌ ಫ್ರಿನ್ಸಿಸ್ಕೋಗೆ ತೆರಳುತ್ತಿದ್ದ ಫಿಜಿ ಏರ್‌ವೇಸ್‌ ವಿಮಾನದಲ್ಲಿದ್ದ 41 ವರ್ಷದ ಅಮೆರಿಕಾದ ನಾಗರಿಕರೊಬ್ಬರು ದಿಢೀರ್‌ ಅಸ್ವಸ್ಥಗೊಂಡು ನಿಧನರಾಗಿದ್ದಾರೆ.

ಸ್ಯಾನ್‌ ಫ್ರಾನ್ಸಿಸ್ಕೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಮಾನ ಭೂಸ್ಪರ್ಶ ಮಾಡಲು ಇನ್ನೇನು ಒಂದು ಗಂಟೆ ಇದೆ ಎನ್ನುವಾಗ ಈ ಘಟನೆ ನಡೆದಿದೆ. ಪ್ರಯಾಣಿಕ “ವೈದ್ಯಕೀಯ ಸಮಸ್ಯೆ ಎದುರಿಸಿದರು” ಮತ್ತು ಅವರ ಪ್ರಾಣ ಉಳಿಸಲು ವಿಮಾನ ಸಿಬ್ಬಂದಿಯ ಸತತ ಪ್ರಯತ್ನಗಳು ಫಲ ನೀಡಲಿಲ್ಲ ಎಂದು ಫಿಜಿ ಏರ್‌ವೇಸ್‌ ತಿಳಿಸಿದೆ. ವಿಮಾನದಲ್ಲಿದ್ದ ವೈದ್ಯರೊಬ್ಬರೂ ಪ್ರಯಾಣಿಕರ ಜೀವವುಳಿಸಲು ಯತ್ನಿಸಿದರು ಎಂದು ಏರ್‌ವೇಸ್‌ ಹೇಳಿದೆ.

ಪ್ರಯಾಣಿಕನ ಸಾವಿಗೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ತನ್ನ ಸಂಸ್ಥೆ ಪ್ರಯಾಣಿಕರ ಮತ್ತು ಸಿಬ್ಬಂದಿಯ ಸುರಕ್ಷತೆಗೆ ಬದ್ಧವಾಗಿದೆ ಎಂದು ಫಿಜಿ ಏರ್‌ವೇಸ್‌ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News