×
Ad

ಉಕ್ರೇನ್ ಶಾಂತಿ ಒಪ್ಪಂದ ಸ್ಥಗಿತಕ್ಕೆ ಝೆಲೆನ್‌ ಸ್ಕಿ ಕಾರಣ: ಅಮೆರಿಕ ಅಧ್ಯಕ್ಷ ಟ್ರಂಪ್

Update: 2026-01-15 21:43 IST

ಡೊನಾಲ್ಡ್ ಟ್ರಂಪ್ | Photo Credit : PTI  

ವಾಷಿಂಗ್ಟನ್, ಜ.15: ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದ ಶಾಂತಿ ಯೋಜನೆ ಸ್ಥಗಿತಗೊಂಡಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿಯೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಸಾವಿರಾರು ಜನರ ಸಾವಿಗೆ ಕಾರಣವಾದ ಸುಮಾರು ನಾಲ್ಕು ವರ್ಷಗಳ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಝೆಲೆನ್‌ಸ್ಕಿಯೇ ಮುಖ್ಯ ಅಡ್ಡಿಯಾಗಿದ್ದಾರೆ ಎಂದು ಶ್ವೇತಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದ್ದಾರೆ. ಒಪ್ಪಂದಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಿದ್ಧರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಒಪ್ಪಂದಕ್ಕೆ ಯಾರು ಅಡ್ಡಿಯಾಗಿದ್ದಾರೆ ಎಂಬ ಪ್ರಶ್ನೆಗೆ ‘ಝೆಲೆನ್‌ಸ್ಕಿ, ಒಪ್ಪಂದದ ಹಾದಿಯಲ್ಲಿ ಮುಂದುವರಿಯಲು ಅಧ್ಯಕ್ಷ ಝೆಲೆನ್‌ಸ್ಕಿಯನ್ನು ಸಿದ್ಧಪಡಿಸಬೇಕಿದೆ’ ಎಂದು ಟ್ರಂಪ್ ಉತ್ತರಿಸಿದರು. ಗುಪ್ತಚರ ಮಾಹಿತಿ ಹಂಚಿಕೆಯ ಮೂಲಕ ಉಕ್ರೇನ್‌ ಗೆ ಭದ್ರತಾ ಖಾತರಿ ಒದಗಿಸುವ ಅಮೆರಿಕ ಪ್ರಸ್ತಾಪವನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ, ‘ನಾವು ಏನಾದರೂ ಮಾಡಲು ಸಾಧ್ಯವಾದರೆ ಸಹಾಯ ಮಾಡುತ್ತೇವೆ. ಯುದ್ಧದಲ್ಲಿ ಅವರು ತಿಂಗಳಿಗೆ ಸುಮಾರು 30,000 ಯೋಧರನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಉತ್ತರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News