×
Ad

ಪೆಸಿಫಿಕ್ ಸಾಗರದಲ್ಲಿ ಮಾದಕದ್ರವ್ಯ ಸಾಗಿಸುವ ದೋಣಿಗಳ ಮೇಲೆ ಅಮೆರಿಕದಿಂದ ದಾಳಿ : 14 ಮಂದಿ ಮೃತ್ಯು

Update: 2025-10-28 20:51 IST

Photo : X

ವಾಶಿಂಗ್ಟನ್, ಅ. 28: ಪೆಸಿಫಿಕ್ ಸಾಗರದಲ್ಲಿ ಮಾದಕ ದ್ರವ್ಯವನ್ನು ಸಾಗಿಸುತ್ತಿದೆ ಎಂಬುದಾಗಿ ಶಂಕಿಸಲಾದ ನಾಲ್ಕು ದೋಣಿಗಳ ಮೇಲೆ ಅಮೆರಿಕ ಸೈನಿಕರು ನಡೆಸಿರುವ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟರ್ ಹೆಗ್‌ಸೇತ್ ಹೇಳಿದ್ದಾರೆ.

ದಾಳಿಯಲ್ಲಿ ಬದುಕುಳಿದ ಒಬ್ಬನನ್ನು ಮೆಕ್ಸಿಕೊದ ಶೋಧ ಮತ್ತು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಅವರು ತಿಳಿಸಿದರು.

ಪೆಸಿಫಿಕ್ ಮತ್ತು ಕೆರಿಬಿಯನ್ ಸಮುದ್ರಗಳಲ್ಲಿ ಮಾದಕ ದ್ರವ್ಯವನ್ನು ಸಾಗಿಸುತ್ತಿವೆ ಎಂಬುದಾಗಿ ಶಂಕಿಸಲಾದ ದೋಣಿಗಳ ಮೇಲೆ ಅಮೆರಿಕ ನಡೆಸುತ್ತಿರುವ ದಾಳಿಗಳ ಸರಣಿಯಲ್ಲಿ ಇದು ಇತ್ತೀಚಿನದಾಗಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ದೇಶನದಂತೆ, ಪೂರ್ವ ಪೆಸಿಫಿಕ್ ಸಾಗರದಲ್ಲಿ ಮಾದಕ ದ್ರವ್ಯವನ್ನು ಸಾಗಿಸುತ್ತಿದೆ ಎಂಬುದಾಗಿ ಶಂಕಿಸಲಾದ ದೋಣಿಗಳ ಮೇಲೆ ಸೋಮವಾರ ದಾಳಿ ನಡೆಸಲಾಯಿತು ಎಂದು ಪೀಟರ್ ಹೆಗ್‌ಸೇತ್ ತಿಳಿಸಿದರು.

ಸರಣಿ ದಾಳಿಗಳಲ್ಲಿ ಕನಿಷ್ಠ 51 ಮಂದಿ ಮೃತಪಟ್ಟಿದ್ದಾರೆ. ಆದರೆ, ಅಮೆರಿಕ ಸೈನಿಕರ ಈ ಕಾರ್ಯಾಚರಣೆಯು, ಅಮೆರಿಕ ಹಾಗೂ ಕೊಲಂಬಿಯ ಮತ್ತು ವೆನೆಝುಯೆಲ ಸರಕಾರಗಳ ನಡುವಿನ ಉದ್ವಿಗ್ನತೆ ಹೆಚ್ಚಳಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News