Photo Credit : X 

ಟೆಹರಾನ್: ಇರಾಕ್‍ನಿಂದ ಅಮೆರಿಕದ ಪಡೆಗಳು ನಿರ್ಗಮಿಸಿರುವುದನ್ನು "ಐತಿಹಾಸಿಕ ವಿಜಯ" ಎಂದು ಇರಾನ್‍ನ ರೆವಲ್ಯೂಷನರಿ ಗಾಡ್ರ್ಸ್(ಐಆರ್‌ಜಿಸಿ) ಗುರುವಾರ ಸ್ವಾಗತಿಸಿದೆ ಹಾಗೂ ಮುಧ್ಯಪ್ರಾಚ್ಯದಿಂದ ಅಮೆರಿಕದ ಸೇನೆ ಸಂಪೂರ್ಣವಾಗಿ ಹೊರಹೋಗಬೇಕೆಂದು ಆಗ್ರಹಿಸಿದೆ.

ʼಹೆಮ್ಮೆಯ ಇರಾಕ್ ರಾಷ್ಟ್ರ, ಇಸ್ಲಾಮಿಕ್ ಪ್ರತಿರೋಧದ ಒಗ್ಗಟ್ಟಿನ ರಂಗ ಮತ್ತು ಇಸ್ಲಾಮಿಕ್ ಜಗತ್ತಿನ ಕ್ರಾಂತಿಕಾರಿ ಹೋರಾಟಗಾರರಿಗೆ ಈ ಐತಿಹಾಸಿಕ ವಿಜಯದ ಶುಭಾಶಯಗಳು' ಎಂದು ಐಆರ್‌ಜಿಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿವೆ.

ಐಸಿಸ್ ಭಯೋತ್ಪಾದಕರ ವಿರುದ್ಧ ಹೋರಾಡಲು 2014ರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ ನಿಯೋಜನೆಗೊಂಡಿದ್ದ ಅಮೆರಿಕ ನೇತೃತ್ವದ ಒಕ್ಕೂಟದ ಪಡೆಗಳು, ಬುಧವಾರ ತಮ್ಮ ಕಾರ್ಯಾಚರಣೆಯನ್ನು ಅಧಿಕೃತವಾಗಿ ಕೊನೆಗೊಳಿಸಿ ಹಿಂದಕ್ಕೆ ಸರಿದಿವೆ.

ಅಮೆರಿಕದ ಉಪಸ್ಥಿತಿಯು ಯಾವುದೇ ಭದ್ರತೆಯನ್ನು ತರಲಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಬದಲಿಗೆ, ಅದು ಪಶ್ಚಿಮ ಏಷ್ಯಾದಲ್ಲಿ ಅಭದ್ರತೆ, ಭಯೋತ್ಪಾದನೆ ಮತ್ತು ಅಸ್ಥಿರತೆಯ ಮೂಲವಾಗಿತ್ತು. ಅಮೆರಿಕವು ಮಧ್ಯಪ್ರಾಚ್ಯವನ್ನೂ ತೊರೆಯಬೇಕು ಮತ್ತು ಭದ್ರತೆಯ ನಿರ್ವಹಣೆಯನ್ನು ಆಯಾ ದೇಶಗಳಿಗೆ ವಹಿಸಬೇಕು ಎಂದು ಐಆರ್‌ಜಿಸಿ ಹೇಳಿಕೆಯಲ್ಲಿ ತಿಳಿಸಿವೆ.

ಈ ಮಧ್ಯೆ, ಇರಾನ್ ಬೆಂಬಲಿತ ಶಕ್ತಿಶಾಲಿ ಸಶಸ್ತ್ರ ಗುಂಪುಗಳು ತಮ್ಮ ಆಯುಧಗಳನ್ನು ಸರಕಾರಕ್ಕೆ ಒಪ್ಪಿಸಲು ಜೂನ್ 30 ಹೊಸ ಗಡುವಾಗಿದೆ ಎಂದು ಇರಾಕ್ ಪ್ರಧಾನಿ ಅಲಿ ಅಲ್-ಝೈದಿ ಗುರುವಾರ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor