×
Ad

ಅಮೆರಿಕ ಇರಾನ್ ನೊಂದಿಗೆ ದೀರ್ಘಕಾಲದ ಒಪ್ಪಂದ ಬಯಸುತ್ತಿದೆ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್

Update: 2025-06-22 20:29 IST

ಜೆ.ಡಿ. ವಾನ್ಸ್ | PC : PTI 

ವಾಷಿಂಗ್ಟನ್: ಅಮೆರಿಕದ ದಾಳಿಯು ಇರಾನ್ ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ಹಿನ್ನಡೆಯನ್ನುಂಟು ಮಾಡಿದ್ದು, ಇದೀಗ ಡೊನಾಲ್ಡ್ ಟ್ರಂಪ್ ರಾಜತಾಂತ್ರಿಕ ಪರಿಹಾರವನ್ನು ಬಯಸುತ್ತಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಹೇಳಿದ್ದಾರೆ.

NBC ಸುದ್ದಿ ಸಂಸ್ಥೆಯ ಮೀಟ್ ದಿ ಪ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ವಾನ್ಸ್, “ಪರಮಾಣು ಯೋಜನೆಯು ಈಗಾಗಲೇ ಯಾವ ಸ್ವರೂಪದಲ್ಲಿ ನಿರ್ಮಾಣವಾಗಿದೆಯೊ ಅದಕ್ಕಿಂತ ಹೆಚ್ಚು ವಿಸ್ತರಿಸಲು ಅಥವಾ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುವುದನ್ನು ನಾವು ಬಯಸುವುದಿಲ್ಲ. ನಮಗೆ ಅವರ ಪರಮಾಣು ಕಾರ್ಯಕ್ರಮವನ್ನು ಅಂತ್ಯಗೊಳಿಸುವುದು ಬೇಕಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ನಮಗೆ ಇರಾನ್ ನೊಂದಿಗೆ ದೀರ್ಘಕಾಲೀನ ಒಪ್ಪಂದದ ಕುರಿತು ಮಾತುಕತೆ ನಡೆಸುವುದು ಬೇಕಿದೆ ಎಂದೂ ಅವರು ಹೇಳಿದ್ದಾರೆ.

ಈ ಮಧ್ಯೆ ಅಮೆರಿಕದ ದಾಳಿಯಿಂದಾಗಿ ರಾಜತಾಂತ್ರಿಕ ಮಾತುಕತೆಯ ಸಾಧ್ಯತೆಗಳು ಕಮರಿ ಹೋಗಿವೆ ಎಂದು ಇರಾನ್ ನ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ಬಾಸ್ ಅಗಾರ್ಚಿ ಹೇಳಿದ್ದಾರೆ ಎಂದು ನಮಗೆ ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News