×
Ad

ಸೋವಿಯತ್ ಒಕ್ಕೂಟದಂತೆಯೇ ಅಮೆರಿಕವೂ ಕುಸಿಯಲಿದೆ: ಹಮಾಸ್ ಎಚ್ಚರಿಕೆ

Update: 2023-11-04 23:53 IST

ಸಾಂದರ್ಭಿಕ ಚಿತ್ರ | Photo: NDTV 

ಗಾಝಾ: ಒಂದು ದಿನ ಅಮೆರಿಕ ಸಂಯುಕ್ತ ಸಂಸ್ಥಾನವೂ ‘ಇತಿಹಾಸದ ಭಾಗವಾಗಲಿದೆ ಮತ್ತು ಯುಎಸ್ಎಸ್ಆರ್(ಸೋವಿಯತ್ ಒಕ್ಕೂಟದಂತೆಯೇ) ಕುಸಿದು ಬೀಳಲಿದೆ ಎಂದು ಹಮಾಸ್ ಶನಿವಾರ ಎಚ್ಚರಿಕೆ ನೀಡಿದೆ.

ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಬ್ರಿಟನ್ ಹಾಗೂ ಹಳೆಯ ಜಾಗತಿಕ ಶಕ್ತಿಗಳು ಸ್ಥಾಪಿಸಿದ್ದವು. ಮತ್ತು ಇದು ಕೂಡಾ ಸೋವಿಯತ್ ಒಕ್ಕೂಟ (ಯುಎಸ್ಎಸ್ಆರ್)ದಂತೆಯೇ ಕುಸಿದು ಬೀಳಲಿದೆ. ಈ ವಲಯದಲ್ಲಿರುವ ಅಮೆರಿಕದ ಶತ್ರುಗಳು ನಿಕಟವಾಗುತ್ತಿವೆ ಮತ್ತು ಸಮಾಲೋಚನೆ ನಡೆಸುತ್ತಿವೆ. ಇವರೆಲ್ಲಾ ಒಟ್ಟಾಗಿ ಯುದ್ಧದಲ್ಲಿ ಕೈಜೋಡಿಸುವ ದಿನ ಬರಲಿದೆ ಮತ್ತು ಆಗ ಅಮೆರಿಕ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳಲಿದೆ. ಅಮೆರಿಕ ಬಲಿಷ್ಟ ದೇಶವಾಗಿ ಉಳಿಯುವುದಿಲ್ಲ ಎಂದು ಹಮಾಸ್ ಮುಖ್ಯಸ್ಥರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News