×
Ad

ವೀಸಾ ಸಮಸ್ಯೆ: ವಿಮಾನ ಸಿಬ್ಬಂದಿಗೆ ಬಳಸಿದ ಸ್ಯಾನಿಟರಿ ಪ್ಯಾಡ್ ಎಸೆದ ಮಹಿಳೆ!

Update: 2025-02-06 09:00 IST

ಜೊಮೊ ಕೆನ್ಯಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ PC: x.com/flightradar24

ಲಾಗೋಸ್: ಜೊಮೊ ಕೆನ್ಯಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಏರಲು ಅನುಮತಿ ನಿರಾಕರಿಸಿದ ಸಿಬ್ಬಂದಿಗೆ ಮಹಿಳೆಯೊಬ್ಬರು ಬಳಸಿದ ಸ್ಯಾನಿಟರಿ ಪ್ಯಾಡ್ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.

ನೈಜೀರಿಯಾದ ಗ್ಲೋರಿಯಾ ಒಮಿಸೋರ್ ಎಂಬಾಕೆ ಲಾಗೋಸ್ ನಿಂದ ಪ್ಯಾರಿಸ್ ಮಾರ್ಗವಾಗಿ ಮ್ಯಾಂಚೆಸ್ಟರ್ ಗೆ ಪ್ರಯಾಣಿಸಬೇಕಿತ್ತು. ಆದರೆ ಅಗತ್ಯವಾಗಿದ್ದ ಅಧಿಕೃತ ಫ್ರೆಂಚ್ ವೀಸಾ ಇಲ್ಲ ಎಂಬ ಕಾರಣಕ್ಕೆ ವಿಮಾನಯಾನ ಸಂಸ್ಥೆಯ ಸಿಬ್ಬಂದಿ, ಈಕೆ ವಿಮಾನ ಏರಲು ಅನುಮತಿ ನೀಡದೇ ಇದ್ದಾಗ ಸಿಬ್ಬಂದಿಯತ್ತ ಸ್ಯಾನಿಟರಿ ಪ್ಯಾಡ್ ಎಸೆದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಲಂಡನ್ ಗೆ ಪರ್ಯಾಯ ಮಾರ್ಗದ ಮೂಲಕ ತೆರಳಲು ಅವಕಾಶ ಮಾಡಿಕೊಡುವುದಾಗಿ ಮಹಿಳೆಗೆ ಭರವಸೆ ನೀಡಿದಾಗ, ಆಕೆಯ ಹತಾಶೆ ತೀವ್ರವಾಯಿತು. ಚೆಕ್ ಇನ್ ಸಿಬ್ಬಂದಿ ಜತೆ ಸಂಘರ್ಷಕ್ಕೆ ಇಳಿದು ಹೊಸ ಪ್ರಯಾಣದ ವೇಳಾಪಟ್ಟಿಯನ್ನು ತಿರಸ್ಕರಿಸಿ, ವ್ಯತ್ಯಯಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾಗಿ ಕೀನ್ಯಾ ಏರ್ ವೇಸ್ ವಿವರಿಸಿದೆ.

ಒಮಿಸೋರ್ ಅವರಿಗೆ ಇದು ಋತುಚಕ್ರದ ಅವಧಿಯಾಗಿತ್ತು. ಈ ಹಂತದಲ್ಲಿ ಬಳಸಿದ ಸ್ಯಾನಿಟರಿ ಪ್ಯಾಡ್ ಹೊರತೆಗೆದು ಚೆಕ್ ಇನ್ ಕೌಂಟರ್ ನಲ್ಲಿದ್ದ ಸಿಬ್ಬಂದಿಯತ್ತ ಎಸೆದರು. ಅದು ನೆಲದ ಮೇಲೆ ಬಿತ್ತು ಎಂದು ಆಪಾದಿಸಲಾಗಿದೆ. "ನೀವು ನನಗೆ ಸ್ಯಾನಿಟರಿ ಟವೆಲ್ ನೀಡಿ. ನೀವು ನನ್ನ ಫೋನ್ ತೆಗೆದುಕೊಳ್ಳುವಂತಿಲ್ಲ. ನಾನು ನೈಜೀರಿಯಾದ ಹಣಕಾಸು ಸಚಿವರ ಜತೆ ಮಾತನಾಡುತ್ತೇನೆ. ನೋಡಿ" ಎಂದು ಮಹಿಳೆ ಕೂಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News