×
Ad

ಎಫ್-1 ವೀಸಾ ನಿಯಮ ಬಿಗಿಗೊಳಿಸಿದ ಅಮೆರಿಕ: ಭಾರತೀಯ ವಿದ್ಯಾರ್ಥಿಗಳಿಗೆ ಸಮಸ್ಯೆ

Update: 2025-08-30 21:37 IST

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್, ಆ.30: ಟ್ರಂಪ್ ಸರಕಾರ ಎಫ್-1 ವೀಸಾ ನಿಯಮವನ್ನು ಬಿಗಿಗೊಳಿಸಿದ್ದು ಅಮೆರಿಕಾದಲ್ಲಿ ಅಧ್ಯಯನ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಹೆಚ್ಚು ಪರಿಶೀಲನೆ ಮತ್ತು ವೀಸಾ ಮಿತಿಗೆ ಒಳಪಡಲಿದ್ದಾರೆ.

ಆಂತರಿಕ ಭದ್ರತಾ ಇಲಾಖೆ ಯೋಜಿಸಿರುವ ಬದಲಾವಣೆಗಳು ವಿದೇಶಿ ಪತ್ರಕರ್ತರಿಗೆ, ವಿನಿಮಯ ಯೋಜನೆಯಡಿ ಅಮೆರಿಕಾಕ್ಕೆ ತೆರಳಿದವರಿಗೆ ಹಾಗೂ ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು, ಕೆಲಸ ಮಾಡಲು ಅಥವಾ ಅಮೆರಿಕದಿಂದ ವರದಿ ಮಾಡಲು ಕಷ್ಟವಾಗಲಿದೆ. ಕಾಲೇಜು ಅಥವಾ ಅಧ್ಯಯನ ವಿಷಯವನ್ನು ಬದಲಾಯಿಸಲು ನಿರ್ಬಂಧ, ವೀಸಾದ ಅವಧಿ ಮತ್ತು ಒಪಿಟಿ ಗ್ರೇಸ್ ಅವಧಿಗೆ ನಿರ್ಬಂಧ ವಿಧಿಸಲು ನಿರ್ಧರಿಸಲಾಗಿದೆ.

ಒಂದು ವರ್ಷ ಅಧ್ಯಯನ ನಡೆಸಿದ ಬಳಿಕವೇ ಕಾಲೇಜುಗಳನ್ನು ಬದಲಾಯಿಸಲು ಅವಕಾಶವಿದೆ. ಪದವಿ ಅಧ್ಯಯನ ನಡೆಸಲು ವೀಸಾ ಪಡೆದವರು ಸ್ನಾತಕೋತ್ತರ ಪದವಿಗೆ ಮತ್ತೆ ಹೊಸದಾಗಿ ವೀಸಾ ಪಡೆಯಬೇಕಾಗುತ್ತದೆ. ಒಂದು ವಿಷಯದ ಅಧ್ಯಯನಕ್ಕಾಗಿ ನೋಂದಾಯಿಸಿಕೊಂಡ ಬಳಿಕ ಏಕಕಾಲದಲ್ಲಿ ಎರಡು ಪದವಿಗೆ ನೋಂದಾವಣೆ ಪಡೆಯಲು ಸಾಧ್ಯವಿಲ್ಲ. ಈಗ ಪದವಿ ಕಾರ್ಯಕ್ರಮದ ಅವಧಿಯ ಆಧಾರದ ಮೇಲೆ ವೀಸಾ ಅವಧಿಯನ್ನು ನಿರ್ಧರಿಸಲಾಗುತ್ತಿದ್ದು ಅದನ್ನು ಬದಲಾಯಿಸಲಾಗುತ್ತದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News