×
Ad

ನೇಪಾಳದ ಬೃಹತ್ ಜೆನ್ ಝೀ ದಂಗೆಯ ನೇತಾರ ಸುದನ್ ಗುರುಂಗ್ ಯಾರು?

Update: 2025-09-09 17:51 IST

ಸುದನ್ ಗುರುಂಗ್ (Photo credit: moneycontrol.com)

ಕಠ್ಮಂಡು: ಸರಕಾರವು ಸೆ.4ರಂದು ಫೇಸ್‌ಬುಕ್ ,ವಾಟ್ಸ್ಯಾಪ್, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ 26 ಸಾಮಾಜಿಕ ಮಾಧ್ಯಮ ಆ್ಯಪ್‌ಗಳನ್ನು ನಿಷೇಧಿಸಿದ್ದನ್ನು ವಿರೋಧಿಸಿ ಯುವಜನರಿಂದ ಮಾರಣಾಂತಕ ದಂಗೆಗೆ ನೇಪಾಳವು ಸೋಮವಾರ ಸಾಕ್ಷಿಯಾಗಿದೆ. ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ಘರ್ಷನೆಗಳಲ್ಲಿ ಕನಿಷ್ಠ 20 ಜನರು ಮೃತಪಟ್ಟಿದ್ದು,300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇಷ್ಟೆಲ್ಲ ಆದ ಮೇಲೆ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಸರಕಾರವು ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಹಿಂದೆಗೆದುಕೊಂಡಿದೆ.

ಮಾರಣಾಂತಿಕ ಘರ್ಷಣೆಗಳ ಬಳಿಕ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ .

ಪ್ರತಿಭಟನೆಗಳ ಮುಂಚೂಣಿಯಲ್ಲಿದ್ದ ಸುದನ್ ಗುರುಂಗ್(36) ಯುವನೇತೃತ್ವದ ಎನ್‌ಜಿಒ ‘ಹಮಿ ನೇಪಾಳ’ ದ ಅಧ್ಯಕ್ಷರಾಗಿದ್ದು, ಇದು ನಾಗರಿಕ ಆಂದೋಲನವಾಗಿ ಬೆಳೆದಿದೆ.

 

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಹಿಂದಿನ ಪೋಸ್ಟ್‌ನಲ್ಲಿ ರ್ಯಾಲಿಗಳನ್ನು ಆಯೋಜಿಸಲು ಅನುಮತಿ ಕೋರಿ ತನ್ನ ಗುಂಪು ಔಪಚಾರಿಕವಾಗಿ ಅರ್ಜಿ ಸಲ್ಲಿಸಿದ್ದನ್ನು ದೃಢಪಡಿಸಿದ್ದ ಗುರುಂಗ್, ಶಾಲಾ ಸಮವಸ್ತ್ರ ಧರಿಸಿ ಪುಸ್ತಕಗಳೊಂದಿಗೆ ಸಾಗುವಂತೆ ಮತ್ತು ಪ್ರತಿಭಟನೆಯನ್ನು ಶಾಂತಿಯುತ ಪ್ರತಿರೋಧದ ಸಂಕೇತವನ್ನಾಗಿ ಪರಿವರ್ತಿಸುವಂತೆ ವಿದ್ಯಾರ್ಥಿಗಳನ್ನು ಆಗ್ರಹಿಸಿದ್ದರು.

ತಳಮಟ್ಟದಿಂದ ನಾಯಕನಾಗಿ ಬೆಳೆದಿರುವ ಗುರುಂಗ್ 2015ರ ಭೂಕಂಪನದ ಬಳಿಕ ರೂಪುಗೊಂಡ ಹಮಿ ನೇಪಾಳದ ಅಧ್ಯಕ್ಷರಾಗಿದ್ದಾರೆ. ಭೂಕಂಪನದ ಸಂದರ್ಭದಲ್ಲಿ ಗುರುಂಗ್ ತನ್ನ ಮಗುವನ್ನು ಕಳೆದುಕೊಂಡಿದ್ದು, ಇದು ಅವರ ಜೀವನದ ದಿಕ್ಕನ್ನೇ ಬದಲಿಸಿತ್ತು.

ಒಮ್ಮೆ ಕಾರ್ಯಕ್ರಮ ಸಂಘಟಕರಾಗಿದ್ದ ಗುರುಂಗ್ ಬಳಿಕ ವಿಪತ್ತು ಪರಿಹಾರ ಮತ್ತು ನಾಗರಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಬಿ.ಪಿ.ಕೊಯಿರಾಲಾ ಆರೋಗ್ಯ ವಿಜ್ಞಾನಗಳ ಸಂಸ್ಥೆಯಲ್ಲಿ ಪಾರದರ್ಶಕತೆಗಾಗಿ ಒತ್ತಾಯಿಸಿ ನಡೆದ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಡಿಜಿಟಲ್ ಯುಗದ ಹತಾಶೆಯನ್ನು ರಚನಾತ್ಮಕ,ಶಾಂತಿಯುತ ಆಂದೋಲನವಾಗಿ ಪರಿವರ್ತಿಸಲು ತನ್ನನ್ನು ಜೆನ್ ಝಡ್‌ನ ಧ್ವನಿಯಾಗಿಸಿಕೊಂಡಿದ್ದಾರೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News