×
Ad

ಕೆಲಸದ ಒತ್ತಡವೇ, ನನ್ನ ಮನೆಗೆ ಬನ್ನಿ: ದೊಡ್ಡ ರೋಬಟ್‍ಗೆ ಪುಟಾಣಿ ರೋಬಟ್ ಆಹ್ವಾನ

Update: 2024-11-21 22:17 IST

ಸಾಂದರ್ಭಿಕ ಚಿತ್ರ | PC : freepik.com 

ಬೀಜಿಂಗ್ : ಸಾಮಾನ್ಯವಾಗಿ ಕೆಲಸದ ಸ್ಥಳಗಳಲ್ಲಿ ಓವರ್‍ಟೈಮ್ ಕೆಲಸದಿಂದ ಸುಸ್ತಾದ ಸಿಬ್ಬಂದಿಗಳನ್ನು ಸಹೋದ್ಯೋಗಿಗಳು ಕಾಫಿಗೆ ಆಹ್ವಾನಿಸುವುದನ್ನು ಕಾಣುತ್ತೇವೆ. ಆದರೆ ಚೀನಾದಲ್ಲಿ ಪುಟಾಣಿ ರೋಬಟ್ ಒಂದು ತನ್ನೊಂದಿಗೆ ಕೆಲಸ ಮಾಡುತ್ತಿರುವ `12 ಸಹೋದ್ಯೋಗಿ ರೋಬಟ್‍ಗಳನ್ನು' ವಿಶ್ರಾಂತಿಗಾಗಿ ಮನೆಗೆ ಆಹ್ವಾನಿಸಿರುವ ವಿಚಿತ್ರ ವಿದ್ಯಮಾನ ವರದಿಯಾಗಿದೆ.

ಚೀನಾದ ಶಾಂಘೈಯಲ್ಲಿನ ರೋಬೊಟಿಕ್ಸ್ ಶೋರೂಂನಲ್ಲಿ ಇದು ನಡೆದಿದೆ. ಶೋರೂಂನಲ್ಲಿರುವ 12 ದೊಡ್ಡ ರೋಬಟ್‍ಗಳಿಗೆ ಕೆಲಸ ಮುಗಿಯುವುದೇ ಇಲ್ಲ ಎಂಬುದನ್ನು ಅರಿತ ಪುಟಾಣಿ ರೋಬಟ್, ತನ್ನೊಂದಿಗೆ ಮನೆಗೆ ಬರುವಂತೆ ಆಹ್ವಾನಿಸಿದೆ. ಪುಟಾಣಿ ರೋಬಟ್(ಎರ್ಬೈ ಎಂದು ಹೆಸರು)ನ ಬೆನ್ನ ಹಿಂದೆಯೇ 12 ದೊಡ್ಡ ರೋಬಟ್‍ಗಳು ಸಾಲಾಗಿ ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆದರೆ, ಈ ರೋಬಟ್‍ಗಳು ಎಲ್ಲಿಗೆ ಹೋಗುತ್ತಿವೆ, ಪುಟಾಣಿ ರೋಬಟ್‍ಗೆ ಮನೆ ಇದೆಯೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಶೋರೂಂನ ಸಿಬ್ಬಂದಿಗಳು `ಇದು ಫೇಕ್ ವೀಡಿಯೊ ಅಲ್ಲ. ನಿಜವಾಗಿ ನಡೆದಿದೆ. ರೋಬಟ್‍ಗಳ ಸಂಭಾಷಣೆ ಮತ್ತು ಕ್ರಿಯೆಗಳು ಪ್ರಯೋಗದ ಭಾಗವಾಗಿತ್ತು. ಎಐ(ಕೃತಕ ಬುದ್ಧಿಮತ್ತೆ) ಬಳಕೆಯ ಕುರಿತು ನಡೆಸಿದ ಪ್ರಯೋಗವಾಗಿದೆ' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News