×
Ad

ಗಾಝಾಕ್ಕೆ ವೈದ್ಯಕೀಯ ನೆರವು ತಲುಪಿಸಿದ ವಿಶ್ವ ಆರೋಗ್ಯ ಸಂಸ್ಥೆ

Update: 2025-06-27 21:08 IST

PC : World Health Organization(WHO)

ಜಿನೆವಾ: ಮಾರ್ಚ್ 2ರ ಬಳಿಕ ಮೊದಲ ಬಾರಿಗೆ ಗಾಝಾಕ್ಕೆ ಮೊದಲ ಬಾರಿಗೆ 9 ಟ್ರಕ್ ಲೋಡ್‍ಗಳಷ್ಟು ವೈದ್ಯಕೀಯ ನೆರವನ್ನು ತಲುಪಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಹೇಳಿದೆ.

9 ಟ್ರಕ್‍ಗಳಲ್ಲಿ ಅಗತ್ಯದ ವೈದ್ಯಕೀಯ ಸರಬರಾಜುಗಳು, 2,000 ಯೂನಿಟ್‍ಗಳಷ್ಟು ರಕ್ತ, 1,500 ಯೂನಿಟ್‍ಗಳಷ್ಟು ಪ್ಲಾಸ್ಮಾಗಳನ್ನು ಕೆರೆಮ್ ಗಡಿದಾಟು(ಬಾರ್ಡರ್ ಕ್ರಾಸಿಂಗ್) ಮೂಲಕ ಯಾವುದೇ ಗೊಂದಲ, ಅಹಿತಕರ ಘಟನೆಗಳಿಲ್ಲದೆ ಗಾಝಾಕ್ಕೆ ತಲುಪಿಸಲಾಗಿದೆ.

ರಕ್ತ ಮತ್ತು ಪ್ಲಾಸ್ಮಾವನ್ನು ನಾಸೆರ್ ಮೆಡಿಕಲ್ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಗೆ ತಲುಪಿಸಿದ್ದು ಅಲ್ಲಿಂದ ಅಗತ್ಯವಿರುವ ಆಸ್ಪತ್ರೆಗೆ ರವಾನಿಸಲಾಗುವುದು. ಪ್ಲಾಸ್ಮಾ, ರಕ್ತ ಮತ್ತಿತರ ವೈದ್ಯಕೀಯ ನೆರವನ್ನು ಮುಂದಿನ ದಿನಗಳಲ್ಲಿ ಫೆಲಸ್ತೀನಿಯನ್ ಪ್ರದೇಶದ ಆಸ್ಪತ್ರೆಗಳಿಗೆ ಒದಗಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಾರ್ಚ್ 2ರಂದು ಗಾಝಾಕ್ಕೆ ಸಂಪೂರ್ಣ ದಿಗ್ಬಂಧನ ವಿಧಿಸಿದೆ. ಸುಮಾರು ಎರಡು ತಿಂಗಳ ನಂತರ ಕೆಲವು ಆಹಾರ ವಸ್ತುಗಳಿಗೆ ಅವಕಾಶ ನೀಡಿದ್ದರೂ ಇತರ ನೆರವು ಪೂರೈಕೆಗೆ ಅವಕಾಶ ನಿರಾಕರಿಸಿತ್ತು. ನೆರವು ಹೊತ್ತ 4 ಟ್ರಕ್‍ಗಳು ಈಗಲೂ ಕೆರೆಮ್ ಶಲೋಮ್‍ನಲ್ಲಿದ್ದು ಇನ್ನೂ ಹಲವು ಟ್ರಕ್‍ಗಳು ಗಾಝಾದತ್ತ ಹೊರಟಿವೆ. ಆದರೆ ಇದು ಸಾಕಾಗದು. ಜೀವ ಉಳಿಸಲು ಹೆಚ್ಚಿನ ಪ್ರಮಾಣದಲ್ಲಿ ನೆರವು ಪೂರೈಸುವ ಅಗತ್ಯವಿದೆ. ಸಾಧ್ಯವಿರುವ ಎಲ್ಲಾ ಮಾರ್ಗಗಳ ಮೂಲಕ ಆರೋಗ್ಯ ನೆರವನ್ನು ತಕ್ಷಣ ಗಾಝಾಕ್ಕೆ ತಲುಪಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News