ಅಮೆರಿಕದ ರಿಯಾಯಿತಿ ಮುಂದುವರಿದರೆ ಮಾತ್ರ ಡಬ್ಯ್ಲೂಟಿಒ ಒಪ್ಪಂದ : ಭಾರತ ಸ್ಪಷ್ಟನೆ
ಅಬುಧಾಬಿ : ವಿವಾದ ಇತ್ಯರ್ಥ ಕಾರ್ಯವಿಧಾನದ ಕುರಿತ ಒಪ್ಪಂದಕ್ಕೆ ತಡೆಯನ್ನು ಅಮೆರಿಕ ನಿಲ್ಲಿಸಿದರೆ ಮಾತ್ರ ಡಬ್ಲ್ಯೂಟಿಒ(ವಿಶ್ವ ವ್ಯಾಪಾರ ಸಂಘಟನೆ)ದಲ್ಲಿ ಹೊಸ ಒಪ್ಪಂದವನ್ನು ಭಾರತ ಅಂತಿಮಗೊಳಿಸುತ್ತದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಬುಧವಾರ ಹೇಳಿದ್ದಾರೆ.
ಅಬುಧಾಬಿಯಲ್ಲಿ ನಡೆಯುತ್ತಿರುವ ವಿಶ್ವ ಆರೋಗ್ಯ ಸಂಘಟನೆಯ 13ನೇ ಸಚಿವ ಮಟ್ಟದ ಸಭೆಯ ನೇಪಥ್ಯದಲ್ಲಿ` ಮಾತನಾಡಿದ ಅವರು `ವಿವಾದ ಇತ್ಯರ್ಥ ವ್ಯವಸ್ಥೆಯ ಕುರಿತು ಯಾವುದೇ ಪ್ರಗತಿ ಸಾಧ್ಯವಾಗದಿದ್ದರೆ ಭಾರತ ಯಾವುದೇ ಒಪ್ಪಂದವನ್ನು ಅಂತಿಮಗೊಳಿಸುವುದಿಲ್ಲ ಎಂದರು.
ವಿವಾದ ಎದುರಾದಾಗ ಅದನ್ನು ಇತ್ಯರ್ಥಗೊಳಿಸಲು ಮೇಲ್ಮನವಿ ಪ್ರಾಧಿಕಾರದ ಅಗತ್ಯವಿದೆ. ಆದರೆ ಕೆಲವು ದೇಶಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಇದು ಡಬ್ಲ್ಯೂಟಿಒ ಕಾರ್ಯನಿರ್ವಹಣೆ ಸಂಪೂರ್ಣ ಸ್ಥಗಿತಕ್ಕೆ ಕಾರಣವಾಗಿದೆ ಎಂದರು.
ಡಬ್ಯ್ಲೂಟಿಒ ಮೇಲ್ಮನವಿ ನ್ಯಾಯಾಲಯಕ್ಕೆ ಹೊಸ ನ್ಯಾಯಾಧೀಶರ ನೇಮಕಾತಿಯನ್ನು ತಡೆಹಿಡಿಯುವ ಮೂಲಕ ಡಬ್ಲ್ಯೂಟಿಒ ವಿವಾದ ಇತ್ಯರ್ಥಗೊಳಿಸುವ ವ್ಯವಸ್ಥೆಗೆ ಅಮೆರಿಕ 2019ರಲ್ಲಿ ತಡೆ ನೀಡಿತ್ತು.