×
Ad

ಪ್ರಪಂಚದಾದ್ಯಂತ X ಸೇವೆಯಲ್ಲಿ ವ್ಯತ್ಯಯ; ಸರ್ವರ್ ಡೌನ್

Update: 2025-11-18 18:58 IST

Photo: timesofindia

ಬೆಂಗಳೂರು, ನ.18: ಎಲಾನ್ ಮಸ್ಕ್ ಮಾಲೀಕತ್ವದ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಮಂಗಳವಾರ ಜಾಗತಿಕ ಮಟ್ಟದಲ್ಲಿ ಸೇವೆಯಲ್ಲಿ ವ್ಯತ್ಯಯವಾಗಿದೆ. ಲಕ್ಷಾಂತರ ಬಳಕೆದಾರರು ಲಾಗಿನ್, ಫೀಡ್, ಹೊಸ ಪೋಸ್ಟ್‌ಗಳನ್ನು ತೋರಿಸದಿರುವುದು ಹಾಗೂ ಅಪ್ಲಿಕೇಶನ್–ವೆಬ್‌ಸೈಟ್ ಎರಡಕ್ಕೂ ಪ್ರವೇಶ ಸಾಧ್ಯವಾಗದೇ ಸಮಸ್ಯೆ ಎದುರಿಸಿದರು.

ಡೌನ್‌ಡೆಕ್ಟರ್ ಮಾಹಿತಿ ಪ್ರಕಾರ, ಭಾರತೀಯ ಕಾಲಮಾನ ಸಂಜೆ 5:15 ಕ್ಕೆ X ಕುರಿತು 11,500 ಕ್ಕೂ ಹೆಚ್ಚು ದೂರು ದಾಖಲಾಗಿವೆ. ಇವುಗಳಲ್ಲಿ 47% ಫೀಡ್ ಲೋಡ್ ಸಮಸ್ಯೆ, 30% ವೆಬ್‌ಸೈಟ್ ದೋಷ, 23% ಸರ್ವರ್ ಸಂಪರ್ಕ ವ್ಯತ್ಯಯ ಕುರಿತು ದೂರು ದಾಖಲಾಗಿದೆ.

ಅಡಚಣೆಗೆ ಮೂಲ ಕಾರಣದ ಬಗ್ಗೆ ಎಕ್ಸ್ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News