×
Ad

ಯೆಮನ್ | ಹೌದಿಗಳ ಬಂಧನದಲ್ಲಿದ್ದ ವಿಶ್ವಸಂಸ್ಥೆ ಸಿಬ್ಬಂದಿ ಬಿಡುಗಡೆ

Update: 2025-10-09 20:34 IST

Photo Credi : aljazeera

ಸನಾ, ಅ.9: ಯೆಮನ್‍ನಲ್ಲಿ ಹೌದಿ ಬಂಡುಕೋರರ ಗುಂಪು ಇತ್ತೀಚೆಗೆ ಬಂಧಿಸಿದ್ದ ವಿಶ್ವಸಂಸ್ಥೆಯ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ.

`ಹೌದಿಗಳ ಬಂಧನದಲ್ಲಿರುವ ಎಲ್ಲಾ ವಿಶ್ವಸಂಸ್ಥೆ ಸಿಬ್ಬಂದಿಗಳನ್ನು ಮತ್ತು ಮಾನವೀಯ ನೆರವು ಒದಗಿಸುವ ಕಾರ್ಯಕರ್ತರನ್ನೂ ತಕ್ಷಣ, ಬೇಷರತ್ತಾಗಿ ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿರುವುದಾಗಿ ವರದಿಯಾಗಿದೆ. ವಿಶ್ವಸಂಸ್ಥೆಯ 53 ಸಿಬ್ಬಂದಿಗಳು ಹೌದಿಗಳ ವಶದಲ್ಲಿದ್ದು ಇವರಲ್ಲಿ ಕೆಲವರು 2021ರಿಂದಲೂ ಬಂಧನದಲ್ಲಿದ್ದಾರೆ. ಯೆಮನ್‍ನಲ್ಲಿ ಸುಮಾರು 15.3 ದಶಲಕ್ಷ ಜನತೆಗೆ ತುರ್ತು ಆಹಾರ ನೆರವು ಒದಗಿಸುತ್ತಿರುವ ವಿಶ್ವ ಆಹಾರ ಯೋಜನೆ(ಡಬ್ಲ್ಯೂಇಎಫ್)ಯ 11 ಸದಸ್ಯರೂ ಬಂಧಿತರಲ್ಲಿ ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News