ಹೌದಿ ದಾಳಿಯಿಂದ ಮುಳುಗಿದ ಹಡಗು; ಯೆಮೆನ್ ಕರಾವಳಿಯಲ್ಲಿ ತೀವ್ರ ಶೋಧ
ಸನಾ(ಯೆಮೆನ್): ಯೆಮೆನಿನ ಹುದೈದಾ ನಗರದಿಂದ ಪಶ್ಚಿಮಕ್ಕೆ ಸುಮಾರು 100 ಕಿಲೋಮೀಟರ್ ದೂರದಲ್ಲಿ ಹಡಗೊಂದು ಮುಳುಗಿರುವ ಘಟನೆ ನಡೆದಿದೆ ಎಂದು ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಉಲ್ಲೇಖಿಸಿದ Aljazeera ವರದಿ ಮಾಡಿದೆ.
ಈ ಹಡಗಿನ ಮೇಲೆ ನಡೆಸಿದ ದಾಳಿಯ ಹಿಂದೆ ಯಾರು ಇದ್ದಾರೆ ಎಂದು ತಿಳಿದು ಬಂದಿಲ್ಲ. ಹಡಗಿನ ಹೆಸರು ಹಾಗೂ ಗುರುತು ಇನ್ನೂ ಬಹಿರಂಗಪಡಿಸಲಾಗಿಲ್ಲ.
UKMTO ಪ್ರಕಾರ, ಹಡಗು ಮುಳುಗಿದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಕರಾವಳಿಯ ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಹೌದಿ ಬಂಡುಕೋರರ ತಂಡಗಳು ವ್ಯಾಪಕ ದಾಳಿಗಳನ್ನು ನಡೆಸುತ್ತಿರುವುದರಿಂದ ಸಮುದ್ರ ಮಾರ್ಗದಲ್ಲಿ ಸಂಚರಿಸುವ ಹಡಗುಗಳು ಭಾರೀ ಅಪಾಯ ಎದುರಿಸುತ್ತಿವೆ.
ಇದಕ್ಕೂ ಮೊದಲು ನಡೆದಿದ್ದ ದಾಳಿಯಲ್ಲಿ ರಕ್ಷಣಾ ತಂಡಗಳು ಕೆಂಪು ಸಮುದ್ರದಿಂದ ಆರು ಸಿಬ್ಬಂದಿಗಳನ್ನು ಜೀವಂತವಾಗಿ ರಕ್ಷಿಸಿದ್ದರು. ಆದರೆ ಬಹಿರಂಗಪಡಿಸದ ಹಡಗಿನ ಮೇಲೆ ನಡೆದ ದಾಳಿಯಲ್ಲಿ 15 ಮಂದಿ ಇನ್ನೂ ಕಾಣೆಯಾಗಿದ್ದು, ಅವರನ್ನು ಹುಡುಕುವ ಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಮುಳುಗಿದ ಹಡಗನ್ನು ಸರಕು ಸಾಗಣೆಗೆ ಬಳಸಲಾಗುತ್ತಿತ್ತೇ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ.
20250708-UKMTO_WARNING_INCIDENT_027-25-UPDATE 003https://t.co/yo0ifPJbtT#MaritimeSecurity #MarSec pic.twitter.com/7VTJBPT8Tt
— UKMTO Ops Centre (@UK_MTO) July 9, 2025