ಯೆಮನ್ | ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ಹೌದಿಗಳ ವಶಕ್ಕೆ : ವರದಿ
Update: 2024-08-13 21:21 IST
ಸಾಂದರ್ಭಿಕ ಚಿತ್ರ
ಸನಾ : ಯೆಮನ್ ರಾಜಧಾನಿ ಸನಾದಲ್ಲಿ ಕಾರ್ಯಾಚರಿಸುತ್ತಿದ್ದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ಒಳಗೆ ನುಗ್ಗಿರುವ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಕಚೇರಿಯ ದಾಖಲೆ, ಪೀಠೋಪಕರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಸನಾದಲ್ಲಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿಗೆ ನುಗ್ಗಿದ ಹೌದಿಗಳು, ಅಲ್ಲಿ ಕೆಲಸ ಮಾಡುತ್ತಿದ್ದ ಯೆಮನ್ ಪ್ರಜೆಗಳನ್ನು ಬೆದರಿಸಿ ದಾಖಲೆ ಪತ್ರವನ್ನು ಪಡೆದುಕೊಂಡರು. ಇದನ್ನು ವಿಶ್ವಸಂಸ್ಥೆ ಖಂಡಿಸುತ್ತದೆ. ಹೌದಿ ಸಶಸ್ತ್ರ ಹೋರಾಟಗಾರರು ತಕ್ಷಣ ವಿಶ್ವಸಂಸ್ಥೆ ಕಚೇರಿಯಿಂದ ತೆರಳಬೇಕು ಮತ್ತು ವಶಕ್ಕೆ ಪಡೆದಿರುವ ವಸ್ತುಗಳನ್ನು ಹಿಂದಿರುಗಿಸಬೇಕು' ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಆಗ್ರಹಿಸಿದ್ದಾರೆ.