×
Ad

ಬಾಂಗ್ಲಾ ವಿದ್ಯಾರ್ಥಿಗಳ ಬೆಂಬಲದಿಂದ ಹೊಸ ಪಕ್ಷ ರಚನೆಗೆ ಯೂನಸ್ ಯೋಜನೆ: ವರದಿ

Update: 2025-02-10 20:14 IST

PC : aljazeera.com

ಢಾಕಾ: ಸಾರ್ವತ್ರಿಕ ಚುನಾವಣೆ ವಿಳಂಬಿಸುವ ಜತೆಗೆ ವಿದ್ಯಾರ್ಥಿ ಸಂಘಟನೆಗಳ ಬೆಂಬಲದಿಂದ `ಕಿಂಗ್ಸ್ ಪಾರ್ಟಿ' ಎಂಬ ರಾಜಕೀಯ ಪಕ್ಷವನ್ನು ರಚಿಸಿ ದೀರ್ಘ ಕಾಲ ಅಧಿಕಾರದಲ್ಲಿ ಉಳಿಯಲು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಯೋಜನೆ ರೂಪಿಸುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್-18 ವರದಿ ಮಾಡಿದೆ.

ಚುನಾವಣೆ ನಡೆಸಲು ಅವಸರವಿಲ್ಲ. ಸುಧಾರಣಾ ಕ್ರಮಗಳತ್ತ ಮತ್ತು ಭ್ರಷ್ಟಾಚಾರ ನಿಗ್ರಹದ ಬಗ್ಗೆ ಆದ್ಯತೆ ನೀಡುವುದಾಗಿ ಯೂನಸ್ ಹೇಳುತ್ತಿದ್ದಾರೆ. ಮಧ್ಯಂತರ ಸರಕಾರಕ್ಕೆ ಸಲಹೆ ನೀಡುವ ಸಮಿತಿಯಲ್ಲಿ ಮೂವರು ವಿದ್ಯಾರ್ಥಿಗಳೂ ಸ್ಥಾನ ಪಡೆದಿದ್ದು ಇದು ವಿದ್ಯಾರ್ಥಿಗಳ ಬೆಂಬಲ ಖಾತರಿಪಡಿಸಿಕೊಂಡು ದೀರ್ಘ ಕಾಲ ಅಧಿಕಾರದಲ್ಲಿ ಮುಂದುವರಿಯುವ ತಂತ್ರಗಾರಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿರುವುದರಿಂದ ಅವರ ಅವಾಮಿ ಲೀಗ್ ಪಕ್ಷ ದುರ್ಬಲಗೊಂಡಿದೆ. ಮತ್ತೊಬ್ಬ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‍ಪಿ) 18 ವರ್ಷಗಳ ಬಳಿಕ ರಾಜಕೀಯ ಮುಂಚೂಣಿಗೆ ಪುನರಾಗಮನಕ್ಕೆ ಹತಾಶ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ, ಮುಹಮ್ಮದ್ ಯೂನಸ್ ಅವರ ಸಂವಿಧಾನ ತಿದ್ದುಪಡಿ ಹಾಗೂ ಅಧಿಕಾರದಲ್ಲಿ ಮುಂದುವರಿಯಲು ನಡೆಸುತ್ತಿರುವ ಸಿದ್ಧತೆ ಅವರ ಮತ್ತು ಬಿಎನ್‍ಪಿ ನಡುವೆ ಕಂದಕವನ್ನು ಸೃಷ್ಟಿಸಿದೆ. ಜತೆಗೆ, ಸಾರ್ವಜನಿಕ ರ್ಯಾಲಿ ಹಾಗೂ ಪ್ರತಿಭಟನೆ ನಡೆಸಲು ಸೀಮಿತ ಅವಕಾಶ ನೀಡುವ ಮೂಲಕ ವಿರೋಧ ಪಕ್ಷಗಳ ಚಟುವಟಿಕೆಗಳನ್ನು ಮೊಟಕುಗೊಳಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದರ ಜತೆಗೆ ವಿಸ್ತøತ ಅಧಿಕಾರವನ್ನು ನ್ಯಾಯಸಮ್ಮತಗೊಳಿಸಲು ಪಾಶ್ಚಿಮಾತ್ಯ ದೇಶಗಳ ಬೆಂಬಲ ಪಡೆಯಲು ಬಯಸಿರುವ ಯೂನಸ್ ಸರಕಾರ, ಅಂತರಾಷ್ಟ್ರೀಯ `ಲಾಬಿ' ಪ್ರಯತ್ನಗಳಲ್ಲಿ ತೊಡಗಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News