×
Ad

ವಿಜಯೋತ್ಸವದಲ್ಲಿ ಜವಾಹರ್ ಲಾಲ್ ನೆಹರೂರನ್ನು ಸ್ಮರಿಸಿದ ನ್ಯೂಯಾರ್ಕ್ ನ ನೂತನ ಮೇಯರ್ ಝೊಹ್ರಾನ್ ಮಮ್ದಾನಿ

Update: 2025-11-05 13:59 IST

ಝೊಹ್ರಾನ್ ಮಮ್ದಾನಿ (Photo: PTI)

ನ್ಯೂಯಾರ್ಕ್: ನ್ಯೂಯಾರ್ಕ್ ನಗರ ಮೇಯರ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನಂತರ, ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿ ಝೊಹ್ರಾನ್ ಮಮ್ದಾನಿ ಅವರು ತಮ್ಮ ಗೆಲುವಿನ ಭಾಷಣದ ವೇಳೆ ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಸ್ಮರಿಸಿದರು.

ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಝೊಹ್ರಾನ್ ಮಮ್ದಾನಿ, 1947ರಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಜವಾಹರ್ ಲಾಲ್ ನೆಹರೂ ಮಾಡಿದ್ದ 'ಟ್ರಸ್ಟಿ ವಿತ್ ಡೆಸ್ಟಿನೀ' ಭಾಷಣವನ್ನು ಉಲ್ಲೇಖಿಸಿದರು.

“ನಾನು ನಿಮ್ಮ ಮುಂದೆ ನಿಂತು ಜವಾಹರ್ ಲಾಲ್ ನೆಹರೂ ಅವರ ಮಾತುಗಳನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಇತಿಹಾಸದಲ್ಲಿ ಹಳೆಯದರಿಂದ ಹೊಸತಕ್ಕೆ ಹೆಜ್ಜೆ ಇಡುವ, ಕಾಲ ಮುಗಿದಾಗ ಸುದೀರ್ಘ ಕಾಲ ತುಳಿತಕ್ಕೊಳಗಾದ ದೇಶದ ಆತ್ಮವು ಭರವಸೆಯೊಂದನ್ನು ಕಂಡುಕೊಳ್ಳುವ ಕ್ಷಣ ಅಪರೂಪಕ್ಕೊಮ್ಮೆ ಬರುತ್ತದೆ. ಇಂದು ನಾವು ಹಳೆಯದರಿಂದ ಹೊಸದಕ್ಕೆ ಕಾಲಿಡುತ್ತಿದ್ದೇವೆ” ಎಂದು ಜವಾಹರ್ ಲಾಲ್ ನೆಹರೂ ಅವರ ಮಾತುಗಳನ್ನು ಪುನರುಚ್ಚರಿಸಿದರು.

“ಈ ವಿಜಯವು ನ್ಯೂಯಾರ್ಕ್ ನ ಹೊಸ ಯುಗವನ್ನು ಸಂಕೇತಿಸುತ್ತದೆ. ನಾವು ಯಾವ ಪ್ರಯತ್ನಕ್ಕೆ ಹಿಂಜರಿಯುತ್ತಾ, ಕಾರಣಗಳ ಪಟ್ಟಿ ನೀಡುತ್ತಿದ್ದೆವೊ, ಅದರ ಬದಲಿಗೆ ನ್ಯೂಯಾರ್ಕ್ ನಿವಾಸಿಗಳು ತಮ್ಮ ನಾಯಕರಿಂದ ದಿಟ್ಟ ಮುನ್ನೋಟವನ್ನು ನಿರೀಕ್ಷಿಸುವ ಕಾಲ ಇದಾಗಿದೆ” ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News