ಕಲಬುರಗಿ: ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ; ಆರೋಪ
Update: 2025-07-22 09:00 IST
ಕಲಬುರಗಿ: ಯುವಕನ ಕಿರುಕುಳಕ್ಕೆ ಬೇಸತ್ತು ಬೆಣ್ಣೇತೋರಾ ಡ್ಯಾಮ್ ಹಿನ್ನೀರಿಗೆ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಮಲಾಪುರ ತಾಲೂಕಿನ ಕುರಿಕೋಟಾ ಗ್ರಾಮದ ಹೊಸ ಕುರಿಕೋಟಾ ಸೇತುವೆ ಸಮೀಪ ನಡೆದಿದೆ.
ಕಮಲಾಪುರ ತಾಲೂಕಿನ ಭೂಸಣಗಿ ಗ್ರಾಮದ ಯುವತಿ ಸಾಕ್ಷಿ ಉಪ್ಪಾರ್ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅದೇ ತಾಲ್ಲೂಕಿನ ರಾಜನಾಳ ಗ್ರಾಮದ ಅಭಿಷೇಕ್ ಮಾಳಗೆ ಎಂಬ ಯುವಕ ನಿರಂತರ ಕಿರುಕುಳ ಕೊಡುತ್ತಿದ್ದ ಕಾರಣ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಯುವತಿ ಹಾಗೂ ಅಭಿಷೇಕ್ ಇಬ್ಬರೂ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ಮನನೊಂದು ಯುವತಿಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯ ಪೊಲೀಸ್, ಅಗ್ನಿಶಾಮಕ ದಳದಿಂದ ಯುವತಿಯ ಮೃತದೇಹದ ಹುಡುಕಾಟ ನಡೆಯುತ್ತಿದೆ.