ಕಲಬುರಗಿ| ಡಾ.ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ: ಬಡ ಜನರಿಗೆ ಉಚಿತ ಕನ್ನಡಕ ವಿತರಣೆ
ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಕಲಬುರಗಿ ಹಾಗೂ ಸ್ಲಂ ಜನರ ಸಂಘಟನೆ ಕರ್ನಾಟಕ ಕಲಬುರಗಿ ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಸಿದ್ದಾರ್ಥ್ ನಗರದ ಬುದ್ಧ ವಿಹಾರದ ಆವರಣದಲ್ಲಿ ಬಡ ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ನಗರ ಆರೋಗ್ಯ ಕೇಂದ್ರ ಹೀರಾಪುರದ ವೈದ್ಯಾಧಿಕಾರಿ ಸುರೇಶ್ ನಾಯಕ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನೇತ್ರ ಸಹಾಯಕ ಅಧಿಕಾರಿಗಳಾದ ಸುರೇಶ್ ಮಹೇಂದ್ರಕರ್, ಯುವ ಮುಖಂಡರಾದ ಪ್ರಕಾಶ್ ಔರಾದಕರ್, ಸ್ಲಂ ಜನರ ಸಂಘಟನೆಯ ಪದಾಧಿಕಾರಿಗಳಾದ ಅಲ್ಲಮಪ್ರಭು ನಿಂಬರ್ಗಾ, ಬಾಬುರಾವ್ ದಂಡಿನಕರ್, ಬ್ರಹ್ಮಾನಂದ ಮಿಂಚಾ, ಗಣೇಶ್ ಕಾಂಬಳೆ, ಶಿವಕುಮಾರ್ ಚಿಂಚೋಳಿ, ಕರುಣ್ ಕುಮಾರ್ ಬಂದರವಾಡ್, ಅತೀಶ್ ಗಾಯಕವಾಡ್, ವಿಶ್ವನಾಥ ಪಟ್ಟಿದಾರ್, ಆಶಾ ಕಾರ್ಯಕರ್ತೆ ಜಯಶ್ರೀ, PHCO ಭಾಗ್ಯಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕಗಳನ್ನು ವಿತರಣೆ ಮಾಡಲಾಯಿತು.