×
Ad

ಕಲಬುರಗಿ | ಕಾಳಗಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ

Update: 2025-08-20 15:14 IST

ಕಲಬುರಗಿ: ಕಾಳಗಿ ಪಟ್ಟಣ ಪಂಚಾಯತ್ ನ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಆರು ಅಭ್ಯರ್ಥಿಗಳು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಚೊಚ್ಚಲ ಪಟ್ಟಣ ಪಂಚಾಯತ್ ನ ಅಧಿಕಾರದ ಗದ್ದುಗೆ ಏರಿದೆ.

ಕಾಳಗಿ ಪಪಂ ಒಟ್ಟು 11 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 6 ಸ್ಥಾನ, ಬಿಜೆಪಿ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

 

ವಾರ್ಡ್ ನಂ. 1 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರುರಾಜ ತಿಪ್ಪಯ್ಯ ಮದ್ದೂರು - 470 ಮತ, ವಾರ್ಡ್ - 2 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಪರಮೇಶ್ವರ ಮಡಿವಾಳ - 317 ಮತ, ವಾರ್ಡ್ ನಂ. 3ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಲಿತಾಬಾಯಿ ಸಿದ್ರಾಮಪ್ಪ ಕಮಲಾಪೂರ - 261 ಮತ, ವಾರ್ಡ್ ನಂ. 4 ರಲ್ಲಿ ಬಿಜೆಪಿ ಅಭ್ಯರ್ಥಿ ಅಂಬವ್ವ ಕಾಳಪ್ಪ ರಾಜಾಪೂರ - 349 ಮತ, ವಾರ್ಡ್ ನಂ.5 ರಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಚಂದ್ರಕಾಂತ ಕಿಟ್ಟದ - 281 ಮತ, ವಾರ್ಡ್ ನಂ.6 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಲಿಯ ಬೇಗಂ ಮಹೆಬೂಬ ಬಿಜಾಪುರ - 433 ಮತ, ವಾರ್ಡ್ ನಂ. 7ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ತಿಮ್ಮಯ್ಯ ಬೆಲೂರ - 408 ಮತ, ವಾರ್ಡ್ ನಂ. 8ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಷಾರಾಣಿ ದತ್ತಾತ್ರೇಯ ಗುತ್ತೇದಾರ 337 ಮತ, ವಾರ್ಡ್ ನಂ.9 ರಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಕಲಾ ಚಂದ್ರಕಾಂತ - 295 ಮತ, ವಾರ್ಡ್ ನಂ.10 ರಲ್ಲಿ ಬಿಜೆಪಿ ಅಭ್ಯರ್ಥಿ ಜಿತೇಂದ್ರ ನೂರಸಿಂಗ್ ರಾಠೋಡ - 282 ಮತ, ವಾರ್ಡ್ ನಂ. 11ರಲ್ಲಿ ಬಿಜೆಪಿ ಅಭ್ಯರ್ಥಿ ಪಾರ್ವತಿ ವಿಠ್ಠಲರಾವ - 555 ಮತಗಳನ್ನು ಪಡೆದುಕೊಳ್ಳುವ ಮೂಲಕ ಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಬಳಿಕ ಉಭಯ ಪಕ್ಷಗಳ ವಿಜಯಿಶಾಲಿಗಳು ಹಾಗೂ ಸ್ಥಳೀಯ ಮುಖಂಡರು ಸಂಭ್ರಮಾಚರಣೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News