×
Ad

ನನ್ನ ಕ್ಷೇತ್ರದ 2 ಲಕ್ಷ ಮತದಾರರು ನನ್ನ ಆಪ್ತರು : ಶಾಸಕ ಅಲಂಪ್ರಭು ಪಾಟೀಲ್

Update: 2025-07-17 21:36 IST

ಕಲಬುರಗಿ: ನನ್ನ ಕ್ಷೇತ್ರದ ಎರಡು ಲಕ್ಷ ಮತದಾರರು ನನ್ನ ಆಪ್ತರಾಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾದ ಲಿಂಗರಾಜ್ ಕಣ್ಣಿ ಅವರು ಒಬ್ಬರೇ ನನ್ನ ಆಪ್ತರಲ್ಲ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗರಾಜ ಕಣ್ಣಿ ಅವರನ್ನು ನಮ್ಮ ಪಕ್ಷದಿಂದ ಉಚ್ಛಾಟಿಸಲಾಗಿದೆ. ಅವರ ಮೇಲೆ ಡ್ರಗ್ಸ್ ಪ್ರಕರಣ ದಾಖಲಾಗಿದ್ದು, ಇದು ಗಂಭೀರ ಪ್ರಕರಣ. ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೆಲಸಗಳಿಗೆ ಬೆಂಬಲ ಕೊಟ್ಟಿಲ್ಲ, ಕೊಡುವುದು ಇಲ್ಲ ಎಂದು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದರು.

ಪ್ರಕರಣ ಕುರಿತು ಮಹಾರಾಷ್ಟ್ರ ಸರಕಾರ ಸಿಬಿಐ ತನಿಖೆ ಮಾಡಲಿ, ಅದಕ್ಕೆ ನಾನು ಪತ್ರ ಬರೆಯುವೆ. ಏನು ಕ್ರಮ ತೆಗೆದುಕೊಳ್ಳಬೇಕೆನ್ನುವುದು ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರ ತೀರ್ಮಾನ ಮಾಡಲಿ ಅದಕ್ಕೆ ನನ್ನದು ಸಹಮತ ಇದೆ. ಇವರ ಹಿಂದೆ ಯಾರು ಇದ್ದಾರೆ ಸತ್ಯ ಹೊರಬರಲಿ ಎಂದರು.

ಈ ಸಂದರ್ಭದಲ್ಲಿ ಡಾ.ಕಿರಣ್ ದೇಶಮುಖ, ಲಿಂಗರಾಜ ತಾರಫೆಲ್, ದಶರಥ್ ಬಾಬು ಒಂಟಿ, ಶಾಮ್ ನಾಟಿಕರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News