×
Ad

ಅಫಜಲಪುರ | ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಆಚರಣೆ

Update: 2026-01-21 17:40 IST

ಅಫಜಲಪುರ : ಪಟ್ಟಣದ ತಹಶೀಲ್‌ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾರ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವವನ್ನು ಭಕ್ತಿಭಾವ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಸಂಜೀವಕುಮಾರ ದಾಸರ ಅವರು ವಹಿಸಿ, ನಿಜ ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಳೇಂದ್ರ ಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಹಾಗೂ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆ.ಎಂ.ಕೊರಬು, ಕೋಲಿ ಸಮಾಜದ ಅಧ್ಯಕ್ಷ ಮಹರಾಯ ಅಗಸಿ, ಶಂಕರ ಮ್ಯಾಕೇರಿ, ಪ್ರಕಾಶ ಜಮಾದಾರ, ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ, ಬಸವರಾಜ ಸಪ್ಪನಗೋಳ, ಮಹಾಂತೇಶ ತಳವಾರ, ಶ್ರೀಮಂತ ಬಿರಾದಾರ, ಬಸವರಾಜ ಚಾಂದಕವಟೆ, ರಮೇಶ ಪೂಜಾರಿ, ವಿಧ್ಯಾಧರ ಮಂಗಳೂರ,ಲಕ್ಷ್ಮೀಪುತ್ರ ಜಮಾದಾರ, ಮಲ್ಲಿಕಾರ್ಜುನ ಸಿಂಗೆ,ದೇವೀಂದ್ರ ಜಮಾದಾರ, ಪ್ರಭಾವತಿ ಮೇತ್ರಿ,ಮಹಾಂತೇಶ ಬಳೂಂಡಗಿ, ರವಿ ಗೌರ, ಶ್ರೀಕಾಂತ ದಿವಾಣಜಿ, ಬಸವರಾಜ ನಿಂಬರ್ಗಿ, ಯಲ್ಲಪ್ಪ ರಮಗಾ,ಮಾರುತಿ ಮೂರನೆತ್ತಿ, ಉದಯಭಟ್ ಪೂಜಾರಿ, ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News