×
Ad

ಕಲಬುರಗಿ | ಅಂಬಿಗರ ಚೌಡಯ್ಯ ವಚನಗಳಲ್ಲಿ ನೈಜ ಸತ್ಯಗಳಿವೆ : ಪ್ರೊ.ಶಶಿಕಾಂತ್ ಎಸ್.ಉಡಿಕೇರಿ

ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಕಾರ್ಯಕ್ರಮ

Update: 2026-01-21 18:23 IST

ಕಲಬುರಗಿ: ನಿಜಶರಣ ಅಂಬಿಗರ ಚೌಡಯ್ಯ ಅವರು 12ನೇ ಶತಮಾನದಲ್ಲಿ ಸಮಾಜದ ನೂನ್ಯತೆಗಳ ಬಗ್ಗೆ ನೇರ ಮತ್ತು ನಿಷ್ಠೂರವಾಗಿ ಮಾತನಾಡಿದ್ದಾರೆ. ಇವರ ಶ್ರೇಷ್ಠ ವಚನಗಳಲ್ಲಿ ನೈಜ ಸತ್ಯಗಳಿದ್ದು, ಸಮಾಜ ಬದಲಾವಣೆಗೆ ಶಕ್ತಿ ನೀಡುತ್ತವೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಎಸ್.ಉಡಿಕೇರಿ ಅಭಿಪ್ರಾಯಪಟ್ಟರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು, ನೇರ ಮತ್ತು ನಿಷ್ಠೂರ ಮಾತಿನಿಂದಲೇ ಬಸವಣ್ಣ ಅವರನ್ನು ನಿಜಶರಣ ಅಂಬಿಗರ ಚೌಡಯ್ಯ ಎಂಬುದಾಗಿ ಬಣ್ಣಿಸಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಬಹುದು ಎಂಬುದಕ್ಕೆ ಚೌಡಯ್ಯ ಅವರ ವಚನಗಳ ಸಾರವೇ ನಿದರ್ಶನ. ಜಾತಿ, ಅಸಮಾನತೆ ಮತ್ತು ನೈತಿಕ ಪ್ರಜ್ಞೆ ಮೂಲಕ ಸಮಾಜದ ಡಾಂಬಿಕತೆಯನ್ನು ಪ್ರಶ್ನಿಸಿ ನಿಜಶರಣ ಎಂದೆನಿಸಿಕೊoಡಿದ್ದಾರೆ ಎಂದು ಹೇಳಿದರು.

ಪತ್ರಕರ್ತ ಸೂರ್ಯಕಾಂತ್ ಜಮಾದಾರ ಮುಖ್ಯ ಅತಿಥಿಯಾಗಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ತಿಳಿದ ಸತ್ಯವನ್ನು ನಿರ್ಭಯವಾಗಿ ಮಾತನಾಡಿದ್ದಾರೆ. ಸಮಾಜದ ಜನರ ನೋವು, ಅನುಭವಗಳನ್ನು ವಚನಗಳ ಮೂಲಕ ಹಂಚಿದ್ದಾರೆ. ಸತ್ಯ ಮತ್ತು ಕಾಯಕ ನಿಷ್ಠೆಗೆ ಹೆಸರಾದ ಚೌಡಯ್ಯ ನೈತಿಕತೆ ಕುರಿತು ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ವಿಭಾಗದ ಕರ್ನಾಟಕ ಪ್ರದೇಶ ಕೋಲಿ ಸಮಾಜದ ಸಂಘಟನಾ ಕಾರ್ಯದರ್ಶಿ ಪಿಡ್ಡಪ್ಪ ಜಾಲಗಾರ,  ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕ ಹಾಗೂ ಕಲಾ ನಿಕಾಯದ ಡೀನ್ ಪ್ರೊ.ಎಚ್.ಟಿ.ಪೋತೆ ಮಾತನಾಡಿದರು..

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ.ಬೈರಪ್ಪ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ.ಎಸ್.ಎಂ.ಗಾಯಕವಾಡ, ಮೌಲ್ಯಮಾಪನ ಕುಲಸಚಿವ ಡಾ.ಎನ್ .ಜಿ.ಕಣ್ಣೂರು, ಕುಲಸಚಿವ ಪ್ರೊ.ರಮೇಶ್ ಲಂಡನಕರ್ ಉಪಸ್ಥಿತರಿದ್ದರು.

ಪ್ರೊ.ರಾಜನಾಳ್ಕರ್ ಲಕ್ಷ್ಮಣ್, ಪ್ರೊ.ಅಬ್ದುಲ್ ರಬ್ ಉಸ್ತಾದ್, ಡಾ.ಸುರೇಶ್ ಜಂಗೆ, ಪ್ರೊ.ಬಿ.ಎಂ.ಕನ್ನಳ್ಳಿ ಸೇರಿದಂತೆ ವಿವಿಧ ವಿಭಾಗಗಳ, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಬಾಗವಹಿಸಿದ್ದರು.

ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ನಾಡಗೀತೆ ಮತ್ತು ಅಂಬಿಗರ ಚೌಡಯ್ಯ ಅವರ ವಚನಗಾಯನ ಪ್ರಸ್ತುತಪಡಿಸಿದರು. ಡಾ.ಪಿ. ನಂದಕುಮಾರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News