ಚಿಂಚೋಳಿ | ಸಮಾಜದಲ್ಲಿ ಜಾಗೃತಿ ಮೂಡಿಸಿದ ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕರು : ಬಸವರಾಜ ಮಾಲಿ
ಚಿಂಚೋಳಿ: ಹನ್ನೆರಡನೇ ಶತಮಾನದಲ್ಲಿ ಕಾಯಕ, ದಾಸೋಹ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಶರಣ ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕರು ಎಂದು ತಾಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಬಸವರಾಜ ಮಾಲಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ವತಿಯಿಂದ ಪ್ರಜಾಸೌಧದಲ್ಲಿ ಬುಧವಾರ ಹಮ್ಮಿಕೊಂಡ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ನಡೆ-ನುಡಿ-ತತ್ವ-ಆದರ್ಶಗಳನ್ನು ಪಾಲಿಸಿ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಹೀರೆ ಅಗಸಿ ಚಿಂಚೋಳಿಯಿಂದ ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯುದ್ದಕ್ಕೂ ಶರಣರ ಪರ ಘೋಷಣೆಗಳು ಮೊಳಗಿದವು. ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆಯು ಅಂತಿಮವಾಗಿ ಪ್ರಜಾಸೌಧಕ್ಕೆ ತಲುಪಿತು.
ಆಡಳಿತ ಅಧಿಕಾರಿ ಸುಬ್ಬಣ್ಣ ಜಮಖಂಡಿ ಜಯಪ್ಪ ಚಾಪಲ್, ಕಾಡಾದ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್, ಅಖಿಲ ಭಾರತ ಕೋಲಿ ಸಮಾಜ ಅಧ್ಯಕ್ಷ ಸುರೇಶ ಭಂಟ, ಕೋಲಿ ಕಬ್ಬಲಿಗ ಸಮಾಜ ಅಧ್ಯಕ್ಷ ಅನೀಲ್ ಜಮಾದಾರ ಅವರು ಅಂಬಿಗರ ಚೌಡಯ್ಯನವರ ಜೀವನ ಹಾಗೂ ಅವರ ವಚನಗಳ ಮಹತ್ವದ ಕುರಿತು ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಕೆ ಎಂ ಬಾರಿ, ಶ್ರೀಮಂತ ಕಟ್ಟಿಮನಿ, ಶರಣು ಪಾಟೀಲ್, ಖಲೀಲ ಪಟೇಲ್, ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು