ಕಲಬುರಗಿ | ಚಾಕುವಿನಿಂದ ತಲೆಗೆ ಇರಿದು ಯುವಕನ ಹತ್ಯೆ
Update: 2026-01-21 11:30 IST
ಕಲಬುರಗಿ: ಚಾಕುವಿನಿಂದ ತಲೆಗೆ ಇರಿದು, ಬಳಿಕ ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಮೋಹನ್ ಲಾಡ್ಜ್ ಹಿಂಭಾಗದ ಉದ್ಯಾನವನದ ಆವರಣದಲ್ಲಿ ಮಂಗಳವಾರ ತಡರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ನಗರದ ಅಪ್ಪರ್ ಲೈನ್ ಸ್ಟೇಷನ್ ಬಜಾರ್ ನಿವಾಸಿ ಸಯ್ಯದ್ ಮೆಹಬೂಬ್ ಇಸ್ಮಾಯಿಲ್ (22) ಹತ್ಯೆಗೀಡಾದ ಯುವಕನಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.